ಷರಿಯತ್ ಕಾನೂನು, ಷರಿಯತ್ ಕೊರ್ಟ್ ಮತ್ತು ತ್ರಿಪಲ್ ತಲಾಖ್ ವಿಚಾರಗಳು ಚರ್ಚೆಗೆ ಗುರಿಯಾಗುತ್ತಿರುವ ಸಂದರ್ಭದಲ್ಲಿ ಟಿವಿಯ ಪ್ಯಾನಲ್ ಡಿಸ್ಕಶನ್ ನಲ್ಲಿ ಮೌಲಾನಾ ಒಬ್ಬರು ಮಹಿಳೆಯ ಮೇಲೆ ಮಾಡಿದ್ದಾರೆ.
ನವದೆಹಲಿ(ಜು.18) ಮುಸ್ಲಿಂ ಧಾರ್ಮಿಕ ಹಕ್ಕುಗಳ ಕುರಿತು ಮಾತನಾಡುತ್ತಿದ್ದ ವಕ್ತಾರ ಅರ್ಷದ್ ಕಾಜ್ಮಿ ಮುಸ್ಲಿಂ ಸಂಪ್ರದಾಯದ ಕೆಲ ಕಟ್ಟು ಪಾಡು ವಿರೋಧಿಸುತ್ತಿದ್ದ ವಕೀಲೆ ಫರಾಹ್ ಫೈಜ್ ಫರಾಹ್ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ. ಪ್ಯಾನಲ್ ಡಿಸ್ಕಶನ್ ನ ವಾದ ವಿವಾದಗಳು ತಾರಕ್ಕೇರಿದಾಗ ಈ ಘಟನೆ ನಡೆದಿದೆ.
ನೋಯ್ಡಾದ ಗೌತಮ್ ಬುದ್ಧ ನಗರದ ಟೆಲಿವಿಷನ್ ಸ್ಟುಡಿಯೋದ ಪ್ಯಾನಲ್ ಡಿಸ್ಕಶನ್ ಗಲಾಟೆಯ ಕೇಂದ್ರವಾಗಿ ಪರಿವರ್ತನೆಯಾಯಿತು. ಈ ವಿಡಿಯೋ ಸದ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.\
ಇಸ್ಲಾಂ ಕಾಪಾಡಲು ಪ್ರತ್ಯೇಕ ಷರಿಯಾ ಕೋರ್ಟ್ ಬೇಕಂತೆ!
ಪ್ಯಾನಲ್ ಡಿಸ್ಕಶನ್ ನಲ್ಲಿ ನಡೆದ ಮಾರಾಮಾರಿ ಇದೀಗ ಪರ ವಿರೋಧದ ಚರ್ಚೆಗೂ ಕಾರಣವಾಗಿದೆ.ಅವಾಚ್ಯ ಶಬ್ದಗಳಿಂದ ಆತ ನನ್ನನ್ನು ನಿಂದಿಸುತ್ತಿದ್ದ.. ಇದನ್ನು ವಿರೋಧಿಸಿ ನಾನುಪ್ರತಿಭಟನೆ ಗೆ ಮುಂದಾದೆ. ಇದನ್ನು ಕಂಡ ಆತ ನನ್ನ ಮೇಲೆ ಇದ್ದಕ್ಕಿದ್ದಂತೆ ಹಲ್ಲೆ ಮಾಡಿದ. ನೀರಿನ ಲೋಟಗಳನ್ನು ನನ್ನ ಮೇಲೆ ಎಸೆದ ಎಂದು ವಕೀಲೆ ಹೇಳಿದ್ದಾರೆ.
ಈ ಸುದ್ದಿಯನ್ನು ಇಂಗ್ಲಿಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ
