Asianet Suvarna News Asianet Suvarna News

ವರ ಬೇಕು ಎಂಬ ಜಾಹೀರಾತಿನಲ್ಲಿ ವಧುವಿನ ಕಡೆಯವರು ಇಟ್ಟ ಬೇಡಿಕೆ ಕೇಳಿದ್ರೆ ನೀವು ಶಾಕ್ ಆಗ್ತೀರಾ ?

ಕೋಲ್ಕತ್ತಾದ ಬಂಗಾಲಿ ಪತ್ರಿಕೆಯೊಂದರಲ್ಲಿ ವರ ಬೇಕಾಗಿದ್ದಾನೆ ಎಂಬ ಜಾಹೀರಾತಿನಲ್ಲಿ ಕೇಳಿರುವ ಬೇಡಿಕೆಯನ್ನು ನೋಡಿದರೆ ಆಶ್ಚರ್ಯ ಪಡುತ್ತೀರಿ.

Matrimonial Ad In WB Seeks Communist Groom

ಕೋಲ್ಕತ್ತಾ(ಮೇ.03): ಸಾಮಾನ್ಯವಾಗಿ ವಧು ಹಾಗೂ ವರ ಬೇಕಾಗಿದ್ದಾನೆ ಎಂಬ ಜಾಹೀರಾತಿನಲ್ಲಿ ಜಾತಿ,ಧರ್ಮ, ಬಣ್ಣ, ಉದ್ಯೋಗ, ಆಸ್ತಿ ಮುಂತಾದ ಬೇಡಿಕೆಗಳಿರುತ್ತವೆ.

ಕೋಲ್ಕತ್ತಾದ ಬಂಗಾಲಿ ಪತ್ರಿಕೆಯೊಂದರಲ್ಲಿ ವರ ಬೇಕಾಗಿದ್ದಾನೆ ಎಂಬ ಜಾಹೀರಾತಿನಲ್ಲಿ ಕೇಳಿರುವ ಬೇಡಿಕೆಯನ್ನು ನೋಡಿದರೆ ಆಶ್ಚರ್ಯ ಪಡುತ್ತೀರಿ. ಇವರು ಇಟ್ಟಿರುವ ಬೇಡಿಕೆ ಭಾರತದ ರಾಜಕೀಯ ಚಿಂತನೆಗಳನ್ನು ಹೊಂದಿರುವ ಗಂಡು. ಇವರಿಗೆ 'ಕಮ್ಯೂನಿಸ್ಟ್ ಗಂಡು' ಬೇಕಾಗಿದ್ದಾನೆ.

ಕೋಲ್ಕಾತ್ತಾದ ನಿವಾಸಿಯಾದ 'ದೋಪಾನುಜ್ ದಾಸ್'ಗುಪ್ತ' ಎಂಬುವವರು ತಮ್ಮ 25 ವರ್ಷ ವಯಸ್ಸಿನ ಸಹೋದರಿಗೆ ಎಡರಂಗ ಚಿಂತನೆಗಳುಳ್ಳ ಹಾಗೂ ರಾಜಕೀಯ ಉದ್ದೇಶಗಳುಳ್ಳ ವರ ಬೇಕಾಗಿದ್ದಾನಂತೆ.

'ದೋಪಾನುಜ್ ದಾಸ್'ಗುಪ್ತ' ಸಹೋದರಿ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದು, ಈಕೆಗೆ ಕಮ್ಯೂನಿಸ್ಟ್ ವಿಚಾರಧಾರೆಗಳುಳ್ಳ ವರನನ್ನು ಹುಡುಕುತ್ತಿದ್ದಾರೆ. ಕೂತಹಲ ಸಂಗತಿಯಂದರೆ ಕಮ್ಯೂನಿಸ್ಟ್ ಸೇರಿದಂತೆ ಯಾವುದೇ ಪಕ್ಷದ ರಾಜಕೀಯ ಕಾರ್ಯಕರ್ತನಲ್ಲ ಆಕೆಯೂ ಒಡಹುಟ್ಟಿದ ತಂಗಿಯಲ್ಲ ದತ್ತುಪಡೆದವಳು. ಈಕೆ ಒಂದು ವರ್ಷದವಳಿದ್ದಾಗ ದತ್ತು ಪಡೆಯಲಾಗಿತ್ತು. ಬಹುಶಃ ಇದೇ ಮೊದಲಬಾರಿಗೆ ನಾವು ರೀತಿಯ ಜಾಹೀರಾತನ್ನು ನೋಡಿರುವುದಾಗಿ ಹಲವರು ತಿಳಿಸಿದ್ದಾರೆ.

Matrimonial Ad In WB Seeks Communist Groom

 

Follow Us:
Download App:
  • android
  • ios