* ಹೆಚ್ಚು ಅಂಕ ಗಳಿಸಲು ನೆರವಾಗುವುದಾಗಿ ಹೇಳಿ ದೌರ್ಜನ್ಯ* ವಿದ್ಯಾರ್ಥಿನಿ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ತೋರುತ್ತಿದ್ದ ಶಿಕ್ಷಕ. * ತರಗತಿಯಲ್ಲಿ ಯಾರೂ ಇಲ್ಲದ ವೇಳೆ ದೌರ್ಜನ್ಯಕ್ಕೆ ಯತ್ನಿಸಿ ಶಾಲೆಯಿಂದ ಅಮಾನತು * ಕ್ಷಮೆ ಕೋರುವ ನೆಪದಲ್ಲಿ ದೌರ್ಜನ್ಯ

ಬೆಂಗಳೂರು: ಪಾಠ ಹೇಳಿಕೊಡುವ ನೆಪದಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋ­ಪದಡಿ ಖಾಸಗಿ ಶಾಲೆಯ ಗಣಿತ ಶಿಕ್ಷಕನನ್ನು ಬಂಧಿಸಿರುವ ದಕ್ಷಿಣ ವಿಭಾಗದ ಪೊಲೀಸರು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನವೆಂಬರ್‌'ನಲ್ಲಿ ಘಟನೆ ನಡೆದಿದ್ದು, ತಡ­ವಾಗಿ ಬೆಳಕಿಗೆ ಬಂದಿದೆ.

ಇಲಿಯಾಸ್‌ ನಗರದ ಹಾರೋನ್‌ ಪಾಷಾ (28) ಬಂಧಿತ. ಆರೋಪಿಯು ಕುಮಾರ­ಸ್ವಾಮಿ ಲೇಔಟ್‌ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಈ ವೇಳೆ 10ನೇ ತರ­W­Üತಿಯ ವಿದ್ಯಾರ್ಥಿನಿಯ ಜೊತೆ ಸಲು­ಗೆಯಿಂದ ನಡೆದುಕೊಳ್ಳುತ್ತಿದ್ದ. ಬಳಿಕ ಪಾಠ ಹೇಳಿಕೊಡುವುದಾಗಿ ತರಗತಿಯಲ್ಲಿ ಒಬ್ಬಳನ್ನೇ ಕೂರಿಸಿಕೊಂಡು ಆತ್ಮೀಯವಾಗಿ ನಡೆದು­ಕೊ­ಳ್ಳು­ತ್ತಿದ್ದ. ದಿನ ಕಳೆದಂತೆ ಪ್ರೀತಿಸು­ತ್ತಿರು­ವುದಾಗಿ ಬಾಲಕಿಗೆ ಹೇಳಿದ್ದ. ಆಕೆ ನಿರಾ­ಕರಿಸಿದಾಗ ಕ್ಷಮೆ ಕೇಳಿ ಸುಮ್ಮನಿದ್ದ. ಮತ್ತೆ ಕೆಲ ದಿನಗಳ ಬಳಿಕ ಪ್ರೀತಿ ನಿವೇದಿಸಿದ್ದ. ಈ ವೇಳೆ ಆಕೆ ಶಾಲೆಯ ಮುಖ್ಯಸ್ಥರ ಗಮನಕ್ಕೆ ತಂದಿದ್ದರು. ಈ ವೇಳೆ ಆತನನ್ನು ಶಾಲೆಯಿಂದ ತೆಗೆದು ಹಾಕಲಾಗಿತ್ತು.

ಕೆಲ ತಿಂಗಳು ನಾಪತ್ತೆಯಾಗಿದ್ದ ಆರೋ­ಪಿಯು ಮತ್ತೆ ಶಾಲೆ ಬಳಿ ಬಂದು ಬಾಲಕಿಯ ಬಳಿ ಕ್ಷಮೆ ಕೇಳಿದ್ದ. ಹೆಚ್ಚು ಅಂಕಗಳಿಸಲು ಸಹಾಯವಾಗುವಂತೆ ಪಾಠ ಮಾಡುವುದಾಗಿ ಆಕೆಯ ಜೊತೆ ಮಾತನಾಡಲು ಆರಂಭಿಸಿದ್ದ. ಹೀಗೆ ಒಂದು ದಿನ ಕಾಫಿ ಕುಡಿಯುವ ನೆಪವೊಡ್ಡಿ ಬಾಲಕಿಯನ್ನು ಜಯನಗರದ ಹೋಟೆಲ್‌ವೊಂದಕ್ಕೆ ಕರೆದೊ­ಯ್ದು ಪಾನೀ­ಯದಲ್ಲಿ ಮತ್ತುಬರುವ ಮಾತ್ರೆ ಬರೆಸಿ ಕುಡಿಸಿದ್ದ. ಬಳಿಕ ರೂಮ್‌ ಕರೆದೊ­ಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದ. ಬಳಿಕ ಮನೆಗೆ ತೆರಳಿದ್ದ ಬಾಲಕಿ ತಂದೆಗೆ ಘಟನೆ ಕುರಿತು ವಿವರಿಸಿದ್ದು, ಬಾಲಕಿ ತಂದೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. 

(epaper.kannadaprabha.in)