ಕಂಬಳ ಆಚರಣೆಗೆ ನಾಳೆ ಹೈಕೋರ್ಟ್ ಅನುಮತಿ ನೀಡಬೇಕೆಂದು ಒತ್ತಾಯಿಸಿ ಕರಾವಳಿ ಮಿತ್ರ ಮಂಡಳಿ ಸಂಘಟನೆ ಸದಸ್ಯರು ಯಶವಂತಪುರ ಹಾಗೂ ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಫ್ರೀಡಂಪಾರ್ಕ್ ವರೆಗೆ ಬೈಕ್ ರಾಲಿ ನಡೆಸಿದರು. ಸಂಗೀತ ನಿರ್ದೇಶಕರಾದ ವಿ.ಮನೋಹರ್, ಗುರುಕಿರಣ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಸೌಂದರ್ಯ ರಮೇಶ್, ವಾಟಾಳ್ ನಾಗರಾಜ್, ಸಾ.ರಾ. ಗೋವಿಂದ್ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಮಂದಿ ರಾಲಿಯಲ್ಲಿ ಪಾಲ್ಗೊಂಡು ಕಂಬಳ ಪರ ವಿಧೇಯಕ ಮಂಡಿಸಬೇಕೆಂದು ಆಗ್ರಹಿಸಿದರು.
ಕಂಬಳ ಕಾಪಾಡಿ ಕೂಗು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಸುವರ್ಣ ನ್ಯೂಸ್ ಆರಂಭಿಸಿದ ಅಭಿಯಾನಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇಂದು ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳು ಬೃಹತ್ ರಾಲಿ ನಡೆಸಿ, ಕಂಬಳ ಕ್ರೀಡೆ ಉಳಿಸುವಂತೆ ಆಗ್ರಹಿಸಿದ್ದಾರೆ.
ಕಂಬಳ ಆಚರಣೆಗೆ ನಾಳೆ ಹೈಕೋರ್ಟ್ ಅನುಮತಿ ನೀಡಬೇಕೆಂದು ಒತ್ತಾಯಿಸಿ ಕರಾವಳಿ ಮಿತ್ರ ಮಂಡಳಿ ಸಂಘಟನೆ ಸದಸ್ಯರು ಯಶವಂತಪುರ ಹಾಗೂ ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಫ್ರೀಡಂಪಾರ್ಕ್ ವರೆಗೆ ಬೈಕ್ ರಾಲಿ ನಡೆಸಿದರು. ಸಂಗೀತ ನಿರ್ದೇಶಕರಾದ ವಿ.ಮನೋಹರ್, ಗುರುಕಿರಣ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಸೌಂದರ್ಯ ರಮೇಶ್, ವಾಟಾಳ್ ನಾಗರಾಜ್, ಸಾ.ರಾ. ಗೋವಿಂದ್ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಮಂದಿ ರಾಲಿಯಲ್ಲಿ ಪಾಲ್ಗೊಂಡು ಕಂಬಳ ಪರ ವಿಧೇಯಕ ಮಂಡಿಸಬೇಕೆಂದು ಆಗ್ರಹಿಸಿದರು.
ನಾಳೆ ಕರ್ನಾಟಕ ಹೈಕೋರ್ಟ್ ಕಂಬಳ ಆಚರಣೆಗೆ ಅನುಮತಿ ನೀಡದಿದ್ದರೆ, ಉಗ್ರ ಹೋರಾಟ ಮಾಡುವುದಾಗಿ ಕರಾವಳಿ ಮಿತ್ರ ಮಂಡಳಿ ಎಚ್ಚರಿಸಿದೆ.