ನವದೆಹಲಿ[ಜು.08]: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ನೈತಿಕ ಹೊಣೆ ಹೊತ್ತು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಎಐಸಿಸಿಯ ವಿವಿಧ ಘಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ರಾಹುಲ್ ಆಪ್ತರ ತಂಡ ಸರಣಿಯಾಗಿ ರಾಜೀನಾಮೆ ನೀಡುತ್ತಿದೆ. ಇದು ಕಾಂಗ್ರೆಸ್‌ನಲ್ಲಿ ರಾಹುಲ್ ಟೀಂನ ಯುಗ ಅಂತ್ಯವಾಯಿತೇ ಎಂಬ ಪ್ರಶ್ನೆಗಳು ಏಳಲು ಕಾರಣವಾಗಿದೆ.

ಟೈಂ ಸರಿ ಇಲ್ಲ ಗುರೂ...!: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಿಲಿಂದ್ ಗುಡ್ ಬೈ!

ರಾಹುಲ್ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ಹಾಗೂ ಮಿಲಿಂದ್ ದೇವೊರಾ ಭಾನುವಾರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಭಾರತೀಯ ಯುವ ಕಾಂಗ್ರೆಸ್ ಮುಖ್ಯಸ್ಥ ಕೇಶವ್ ಚಂದ್ ಯಾದವ್, ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಘಟಕದ ಮುಖ್ಯಸ್ಥ ನಿತಿನ್ ರಾವತ್, ತೆಲಂಗಾಣ ಕಾಂಗ್ರೆಸ್ ಕಾರ್ಯಾಧ್ಯಕ್ಷ ಉತ್ತಮ್ ರೆಡ್ಡಿ, ಗೋವಾ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋಡಂಕರ್ ಸೇರಿದಂತೆ ಹಲವು ಯುವ ನಾಯಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹೀಗೆ ರಾಜೀನಾಮೆ ನೀಡಿದವರೆಲ್ಲಾ ಭಾರೀ ನಿರೀಕ್ಷೆಗಳೊಂದಿಗೆ ರಾಹುಲ್ ಅವಧಿಯಲ್ಲಿ ನೇಮಕವಾಗಿದ್ದವರು.

ಮತ್ತೋರ್ವ ಪ್ರಮುಖ ಕೈ ಮುಖಂಡ ರಾಜೀನಾಮೆ : ಹುದ್ದೆಗೆ ಗುಡ್ ಬೈ

ರಾಹುಲ್ ಏಕಾಏಕಿ ರಾಜೀನಾಮೆ ಬಳಿಕ ಅವರ ಆಪ್ತರ ಭವಿಷ್ಯದ ಬಗ್ಗೆ ಪಕ್ಷದ ಆಂತರಿಕ ವಲದಯಲ್ಲೇ ದೊಡ್ಡ ಮಟ್ಟದ ಪ್ರಶ್ನಾರ್ಥಕ ಚಿಹ್ನೆಗಳು ಎದ್ದಿವೆ. ಬಹುತೇಕರ ರಾಹುಲ್ ನೋಡಿ ಹುದ್ದೆ ವಹಿಸಿಕೊಂಡಿದ್ದರು. ಈ ಪೈಕಿ ಹಲವರು ಈಗಾಗಲೇ ರಾಹುಲ್ ರಾಜೀನಾಮೆ ಬಳಿಕ ತಾವೂ ರಾಜೀನಾಮೆ ಸಲ್ಲಿಸಿದ್ದರೆ, ಉಳಿದವರು ತಮ್ಮ ಕಥೆ ಏನು ಎಂಬುದು ಅರಿಯದೇ ಆಕಾಶ ನೋಡಿ ಕೂರುವಂತಾಗಿದೆ.

ಮತ್ತೊಂದೆಡೆ ಕಾಂಗ್ರೆಸ್‌ನ ಮುಂದಿನ ಅಧ್ಯಕ್ಷರ ಆಯ್ಕೆಗೆ ಪಕ್ಷದ ಹಿರಿಯ ನಾಯಕರು ನಡೆಸುತ್ತಿರುವ ಸಭೆಗಳಲ್ಲೂ ರಾಹುಲ್ ಆಪ್ತ ಕಿರಿಯ ನಾಯಕರಿಗೆ ಯಾವುದೇ ಮನ್ನಣೆ ನೀಡುತ್ತಿಲ್ಲ. ಇದು ಕೂಡಾ ಪಕ್ಷದಲ್ಲಿ ರಾಹುಲ್ ಟೀಂ ಆಲೌಟ್‌ನ ಸುಳಿವು ಎಂದೇ ಹೇಳಲಾಗುತ್ತಿ