ಹುತಾತ್ಮ ಯೋಧ ಚಂದ್ರು ಅಂತ್ಯ ಸಂಸ್ಕಾರ ಇಂದು‌ ಅವರ ಸ್ವಗ್ರಾಮ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹರದೂರು ಗ್ರಾಮದಲ್ಲಿ ಮಧ್ಯಾಹ್ನ‌12 ಗಂಟೆಗೆ ನಡೆಯಲಿದೆ.
ಬೆಂಗಳೂರು (ಮಾ. 15): ಹುತಾತ್ಮ ಯೋಧ ಚಂದ್ರು ಅಂತ್ಯ ಸಂಸ್ಕಾರ ಇಂದುಅವರ ಸ್ವಗ್ರಾಮ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹರದೂರು ಗ್ರಾಮದಲ್ಲಿ ಮಧ್ಯಾಹ್ನ12 ಗಂಟೆಗೆ ನಡೆಯಲಿದೆ.
ಬೆಳಿಗ್ಗೆ 8-30 ರಿಂದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅರಕಲಗೂಡು ತಾಲ್ಲೂಕು ಕಛೇರಿ ಎದುರು ಸಾರ್ವಜನಿಕ ರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾರ್ಚ್13 ರಂದು ಛತ್ತೀಸ್’ಗಡ್ ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದ್ದ ನಕ್ಸಲ್ ದಾಳಿಗೆ ಯೋಧ ಚಂದ್ರು ಬಲಿಯಾಗಿದ್ದರು.
ವೀರ ಯೋಧನ ಮೃತದೇಹ ನಿನ್ನೆ ರಾತ್ರಿ ತವರು ಜಿಲ್ಲೆ ತಲುಪಿದೆ. ಹುಟ್ಟೂರು ಹರದೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಅಂತ್ಯಕ್ರಿಯೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಉಸ್ತುವಾರಿ ಸಚಿವ ಎ.ಮಂಜು ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ.
