ಜೈಪುರ ಜಿಲ್ಲೆಯ ಕರೇರಿ ಗ್ರಾಮದ ಬಡ ರೈತ ಕುಟುಂಬದಲ್ಲಿ ಜನಿಸಿದ ರೂಪಾ ಅವರನ್ನು ಅವರು 3ನೇ ತರಗತಿಯಲ್ಲಿದ್ದಾಗಲೇ ಶಂಕರ್‌ಲಾಲ್ ಎಂಬುವರ ಜತೆ ವಿವಾಹ ಮಾಡಲಾಗಿತ್ತು. ರೂಪಾ ಹಿರಿಯ ಸೋದರಿ ರುಕ್ಮಾರನ್ನು ಶಂಕರ್‌ಲಾಲ್ ಅಣ್ಣನಿಗೆ ವಿವಾಹ ಮಾಡಿಕೊಡಲಾಗಿತ್ತು.
ಕೋಟಾ (ರಾಜಸ್ಥಾನ): ಎಂಟನೆ ವಯಸ್ಸಿಗೇ ಬಾಲ್ಯ ವಿವಾಹವಾದ ಹಾಲಿ 21 ವರ್ಷದ ಮಹಿಳೆಯೊಬ್ಬಳು ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ)ನಲ್ಲಿ ರ್ಯಾಂಕ್ ಪಡೆಯುವ ಮೂಲಕ ದೇಶದ ಗಮನ ಸೆಳೆದಿದ್ದಾಳೆ. ತನ್ಮೂಲಕ ವೈದ್ಯೆಯಾಗಬೇಕು ಎಂಬ ತನ್ನ ಬಹುದಿನಗಳ ಕನಸನ್ನು ನನಸಾಗಿಸಿಕೊಳ್ಳಲು ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.
ಬಾಲ್ಯ ವಿವಾಹಕ್ಕೊಳಗಾದ ಮಹಿಳೆಯರು ಕೌಂಟುಬಿಕ ಜಂಜಾಟದಲ್ಲೇ ಮುಳುಗಿ ಶಿಕ್ಷಣ, ಉದ್ಯೋಗ ಎಲ್ಲವನ್ನೂ ಮರೆಯುವ ಸುದ್ದಿಗಳೇ ಹೆಚ್ಚಾಗಿರುವಾಗ ರೂಪಾ ಎಂಬಾಕೆಯ ಈ ಅಪರೂಪದ ಕಥೆ ಎಲ್ಲರ ಗಮನ ಸೆಳೆದಿದೆ.
ರೂಪಾ ಯಾದವ್ ಎಂಬುವರೇ ಈ ಸಾಧನೆ ಮಾಡಿದಾಕೆ. ಅವರು ನೀಟ್ ಪರೀಕ್ಷೆಯಲ್ಲಿ 603 ಅಂಕ ಗಳಿಸಿ 2612ನೇ ರ್ಯಾಂಕ್ ಪಡೆದಿದ್ದಾರೆ. ವೃತ್ತಿಯಲ್ಲಿ ರೈತರಾಗಿರುವ ರೂಪಾ ಅವರ ಪತಿ ಹಾಗೂ ಭಾವ, ಗ್ರಾಮಸ್ಥರ ವಿರೋಧದ ನಡುವೆಯೂ ಆಕೆಯನ್ನು ಓದಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜೈಪುರ ಜಿಲ್ಲೆಯ ಕರೇರಿ ಗ್ರಾಮದ ಬಡ ರೈತ ಕುಟುಂಬದಲ್ಲಿ ಜನಿಸಿದ ರೂಪಾ ಅವರನ್ನು ಅವರು ೩ನೇ ತರಗತಿಯಲ್ಲಿದ್ದಾಗಲೇ ಶಂಕರ್ಲಾಲ್ ಎಂಬುವರ ಜತೆ ವಿವಾಹ ಮಾಡಲಾಗಿತ್ತು. ರೂಪಾ ಹಿರಿಯ ಸೋದರಿ ರುಕ್ಮಾರನ್ನು ಶಂಕರ್ಲಾಲ್ ಅಣ್ಣನಿಗೆ ವಿವಾಹ ಮಾಡಿಕೊಡಲಾಗಿತ್ತು. ವಿವಾಹವಾದ ಬಳಿಕವೂ ಗಂಡನ ಮನೆಯ ಪ್ರೋತ್ಸಾಹದಿಂದಾಗಿ ಓದು ಮುಂದುವರಿಸಿದ ರೂಪಾ, ಮನೆ ಕೆಲಸಗಳನ್ನು ಮಾಡುತ್ತಲೇ 10ನೇ ತರಗತಿಯಲ್ಲಿ ಶೇ.84 ಅಂಕ, 12ನೇ ತರಗತಿಯಲ್ಲಿ ಶೇ.84 ಅಂಕವನ್ನು ಗಳಿಸಿದ್ದರು. ಬಳಿಕ ಕೋಟಾದ ತರಬೇತಿ ಕೇಂದ್ರ ಸೇರಿ ನೀಟ್ನಲ್ಲಿ ರ್ಯಾಂಕ್ ಪಡೆದಿದ್ದಾರೆ. ರೂಪಾ ಓದಿಗಾಗಿ ಪತಿ ಹಾಗೂ ಭಾವ ಆಟೋ ಓಡಿಸಿ ಕೂಡ ದುಡ್ಡು ಹೊಂದಿಸಿಕೊಟ್ಟಿದ್ದಾರೆ.
