ನೋಟ್ ಬ್ಯಾನ್ ಬಿಸಿಯಿಂದ ಹಣ ಹೊಂದಿಸಲಾಗದೆ ದೆಹಲಿಯ ಬ್ರಹ್ಮಾನಾನ್' ಕಾಲೋನಿಯ ರಾಮಕೃಷ್ಣ ಮಂದಿರದಲ್ಲಿ ನಡೆದ ಮದುವೆಯಿಂದ ದಾಖಲೆಯೊಂದು ಆಗಿದೆ. ಈ ಮದುವೆ ದೇವಸ್ಥಾನದಲ್ಲಿ ಸರಳವಾಗಿ ನಡೆದಿದ್ದು, ಬಂದಿದ್ದ ಅತಿಥಿಗಳಿಗೆ ನೀರು ನೀಡಿ ಸ್ವಾಗತಿಲಾಗಿದೆ. ಬಳಿಕ ವಿಧಿವತ್ತಾಗಿ ಮದುವೆ ಮಾಡಿಸಿದ ಐವರು ಪಂಡಿತರು ಕೇವಲ 11 ರೂಪಾಯಿಯನ್ನು ದಕ್ಷಿಣೆಯಾಗಿ ಸ್ವೀಕರಿಸಿದ್ದಾರೆ.

ನವದೆಹಲಿ(ಡಿ.18): ನೋಟ್ ಬ್ಯಾನ್ ಬಿಸಿಯಿಂದ ಹಣ ಹೊಂದಿಸಲಾಗದೆ ದೆಹಲಿಯ ಬ್ರಹ್ಮಾನಾನ್' ಕಾಲೋನಿಯ ರಾಮಕೃಷ್ಣ ಮಂದಿರದಲ್ಲಿ ನಡೆದ ಮದುವೆಯಿಂದ ದಾಖಲೆಯೊಂದು ಆಗಿದೆ. ಈ ಮದುವೆ ದೇವಸ್ಥಾನದಲ್ಲಿ ಸರಳವಾಗಿ ನಡೆದಿದ್ದು, ಬಂದಿದ್ದ ಅತಿಥಿಗಳಿಗೆ ನೀರು ನೀಡಿ ಸ್ವಾಗತಿಲಾಗಿದೆ. ಬಳಿಕ ವಿಧಿವತ್ತಾಗಿ ಮದುವೆ ಮಾಡಿಸಿದ ಐವರು ಪಂಡಿತರು ಕೇವಲ 11 ರೂಪಾಯಿಯನ್ನು ದಕ್ಷಿಣೆಯಾಗಿ ಸ್ವೀಕರಿಸಿದ್ದಾರೆ.

ಶಾಸ್ತ್ರಿ ನಗರ ಕಾಲೋನಿಯ ಸತ್ಯೇಂದ್ರ್ ಸೈನಿ ಹಾಗೂ ಬಿಲ್ಲೂ ಸೈನಿಯ ಮದುವೆ ನಿಶ್ಚಯವಾಗಿತ್ತು. ಆದರೆ ಕ್ಯಾನ್ಸರ್'ನಿಂದ ಬಳಲುತ್ತಿರುವ ಮೋನಿಕಾಳ ತಂದೆ ಕೆಲವೇ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿರುವಾಗಲೇ ನೋಟ್ ಬ್ಯಾನ್ ಬಿಸಿಯೂ ತಟ್ಟಿತ್ತು. ಹೀಗಾಗಿ ವಧುವಿನ ಮನೆಯವರು ಹಣ ಹೊಂದಿಸಲಾಗದ ಕಾರಣ ಮದುವೆಯನ್ನು ಮುಂದೂಡುವಂತೆ ಹುಡುಗನ ಮನೆಯವರಿಗೆ ತಿಳಿಸಿದ್ದರು.

ಇದನ್ನು ಕೇಳಿದ ಊರಿನ ಹಿರಿಯರು ಇಬ್ಬರ ಮನೆಯವರನ್ನೂ ಕರೆಸಿ ಮಾತುಕತೆ ನಡೆಸಿ, ರಾಧಾ ಕೃಷ್ಣ ಮಂದಿರದಲ್ಲಿ ಕೇವಲ 365 ರೂಪಾಯಿ ಖರ್ಚು ಮಾಡಿ ಮದುವೆ ನೆರವೇರಿಸಿದ್ದಾರೆ. ಬಂದ ಅತಿಥಿಗಳಿಗೆ ನೀರು ನೀಡಿ ಸ್ವಾಗತಿಸಿದ್ದಾರೆ. ಈ ಕುರಿತಾಗಿ ಮಾತನಾಡಿದ ವರ 'ನೋಟ್ ಬ್ಯಾನ್'ನಿಂದಾಗಿ ಮದುವೆಗೆ ಹಣ ಹೊಂದಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನಾವು ಸರಳವಾಗಿ ಮದುವೆಯಾಗಿದ್ದೇವೆ. ನಮ್ಮ ಮದುವೆಯ ಸರಳತೆ ಕುರಿತಾಗಿ ಎಲ್ಲರೂ ಮಾತನಾಡಿ ಹೊಗಳುತ್ತಿದ್ದಾರೆ ಹೀಗಾಗಿ ತುಂಬಾ ಖುಷಿಯಾಗುತ್ತಿಎ' ಎಂದಿದ್ದಾರೆ. .