ಅನಿರ್ದಿಷ್ಟಾವಧಿ ಉಪವಾಸ ಪ್ರತಿಭಟನೆಯಲ್ಲೇ ದೇವರಾಜ್ ಗುಜ್ಜರ್ ಎಂಬಾತ ಮದುವೆಯಾಗಿದ್ದಾನೆ.

ವಿಶಿಷ್ಟ ರೀತಿಯಲ್ಲಿ ವಿವಾಹವಾಗಬೇಕೆಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಇಲ್ಲೊಬ್ಬ ತನ್ನ ವಿವಾಹವನ್ನು ಪ್ರತಿಭಟನಾ ಸ್ಥಳದಲ್ಲೇ ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾನೆ. ವಿಶೇಷ ಹಿಂದುಳಿದ ವರ್ಗಗಳ ಮೀಸಲಾತಿ ನೀಡಬೇಕೆಂದು ಗುಜ್ಜರ್ ಸಮುದಾಯದ ಕೆಲವರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಪ್ರತಿಭಟನೆಯಲ್ಲೇ ದೇವರಾಜ್ ಗುಜ್ಜರ್ ಎಂಬಾತ ಮದುವೆಯಾಗಿದ್ದಾನೆ. ಎಂಟು ತಿಂಗಳ ಹಿಂದೆಯೇ ಮದುವೆ ನಿಶ್ಚಿತಾರ್ಥವಾಗಿತ್ತಂತೆ. ಇದೀಗ ಮೀಸಲಾತಿಗಾಗಿ ಪ್ರತಿಭಟನೆ ನಿರತರಾಗಿರುವ ದೇವರಾಜ್, ಮದುವೆ ಮತ್ತು ಉದ್ಯೋಗ ಜೀವನದಲ್ಲಿ ಮುಖ್ಯವಾದುದು ಎಂದು ಭಾವಿಸಿ ಪ್ರತಿಭಟನೆಯಲ್ಲಿದ್ದುಕೊಂಡೇ ಮದುವೆಯಾಗಿದ್ದಾನೆ. ಪತಿಯ ಹೋರಾಟಕ್ಕೆ ತನ್ನದೂ ಬೆಂಬಲವಿದೆ ಎಂದು ನವವಿವಾಹಿತೆ ಮಮತಾ ಹೇಳಿದ್ದಾರೆ.