Asianet Suvarna News Asianet Suvarna News

ಬೆಂಗಳೂರು ವಿವಿಯಲ್ಲಿ ಅಂಕಪಟ್ಟಿ ಗೋಲ್'ಮಾಲ್; ವಿವಿ ಅಧಿಕಾರಿಗಳಿಂದ ಕೋಟಿ ಕೋಟಿ ಹಣ ಗುಳುಂ

ಬೆಂಗಳೂರು ವಿಶ್ವವಿದ್ಯಾಲಯ ಅಂಕಪಟ್ಟಿ ಖರೀದಿಯಲ್ಲಿ ದೊಡ್ಡ ಗೋಲ್ ಮಾಲ್ ನಡೆದಿದೆ ಅನ್ನೋ ಆರೋಪ ಕೇಳಿಬಂದಿದೆ. 2015 ರಿಂದ ಇಲ್ಲಿ ತನಕ ಅಂಕಪಟ್ಟಿ ಖರೀದಿಗೆ ಬೆಂಗಳೂರು ವಿವಿ ಟೆಂಡರ್ ಕರೆಯದೇ ಆಂಧ್ರ ಮೂಲದ ಹೈಟೆಕ್ ಅನ್ನೋ ಖಾಸಗಿ ಸಂಸ್ಥೆಗೆ ಕೊಟ್ಟಿದೆ ಎನ್ನುವ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Marks Card Manipulate in Bengaluru University

ಬೆಂಗಳೂರು (ನ.22): ಬೆಂಗಳೂರು ವಿಶ್ವವಿದ್ಯಾಲಯ ಅಂಕಪಟ್ಟಿ ಖರೀದಿಯಲ್ಲಿ ದೊಡ್ಡ ಗೋಲ್ ಮಾಲ್ ನಡೆದಿದೆ ಅನ್ನೋ ಆರೋಪ ಕೇಳಿಬಂದಿದೆ. 2015 ರಿಂದ ಇಲ್ಲಿ ತನಕ ಅಂಕಪಟ್ಟಿ ಖರೀದಿಗೆ ಬೆಂಗಳೂರು ವಿವಿ ಟೆಂಡರ್ ಕರೆಯದೇ ಆಂಧ್ರ ಮೂಲದ ಹೈಟೆಕ್ ಅನ್ನೋ ಖಾಸಗಿ ಸಂಸ್ಥೆಗೆ ಕೊಟ್ಟಿದೆ ಎನ್ನುವ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಈಗಾಗಲೇ ಸರ್ಕಾರಿ ಅಂಗ ಸಂಸ್ಥೆಯಾದ ಎಂ.ಎಸ್.ಐ.ಎಲ್ ನಿಂದ 9 ಲಕ್ಷ ಅಂಕಪಟ್ಟಿಗಳನ್ನ ವಿವಿಗೆ ನೀಡಿದೆ. ಆದರೆ ಬೆಂಗಳೂರು ವಿಶ್ವವಿದ್ಯಾಲಯ ಈ ಅಂಕಪಟ್ಟಿಗಳನ್ನ ವಿದ್ಯಾರ್ಥಿಗಳಿಗೆ ನೀಡದೇ ಹೈಟೆಕ್ ಕಂಪನಿಯಿಂದ ಖರೀದಿಸಿದ ಕಳಪೆ ಗುಣಮಟ್ಟದ ಅಂಕಪಟ್ಟಿಗಳನ್ನ ವಿದ್ಯಾರ್ಥಿಗಳಿಗೆ ನೀಡಿದೆ. ಸರ್ಕಾರ ಎಂ.ಎಸ್.ಐ.ಎಲ್ ನಿಂದಲೇ ಅಂಕಪಟ್ಟಿಗಳನ್ನ ಖರೀದಿಸಬೇಕು ಅಂತ ಉನ್ನತ ಶಿಕ್ಷಣ ಇಲಾಖೆ ರಾಜ್ಯದ 17 ವಿಶ್ವವಿದ್ಯಾಲಯಗಳಿಗೆ ಆದೇಶ ಮಾಡಿದೆ..ಈ ಆದೇಶವನ್ನ ಬೆಂಗಳೂರು ವಿಶ್ವವಿದ್ಯಾಲಯ, ಗುಲ್ಬರ್ಗಾ ವಿವಿ, ಕುವೆಂಪು ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯ ಸರ್ಕಾರದ ಆದೇಶವನ್ನೇ ಪಾಲನೆ ಮಾಡಿಲ್ಲ..ಕೆಟಿಟಿಪಿ ಕಾಯಿದೆಯನ್ನ ವಿವಿಗಳು ಸಂಪೂರ್ಣವಾಗಿ ಉಲ್ಲಂಘಿಸಿ ಖಾಸಗಿಯವರಿಗೆ ಮಣೆ ಹಾಕುತ್ತಿದ್ದಾರೆ. ಈ ಮೂಲಕ ಖಾಸಗಿ ಕಂಪನಿಗೆ ಮಣೆಹಾಕಿ ಕೋಟಿ ಕೋಟಿ ಹಣವನ್ನ ವಿವಿ ಅಧಿಕಾರಿಗಳು ಗುಳುಂ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

Follow Us:
Download App:
  • android
  • ios