ಪುಣೆ [ಜೂ.19] : ಬಂಗಾರದ ವ್ಯಾಪಾರಿಗೆ ವಂಚಿಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪ್ರಸಿದ್ಧ ಟಿವಿ ನಟ ಹಾಗೂ ಪತ್ನಿಯನ್ನು ಬಂಧಿಸಲಾಗಿದೆ. 

25 ಲಕ್ಷ ರು.ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಾಠಿ ಟಿವಿ ನಟ ಮಿಲಿಂದ್ ದಸ್ತಾನೆ, ಪತ್ನಿ ಸಯಾಲಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

ಮಿಲಿಂದ್ ಪತ್ನಿ ಸಯಾಲಿ ಅವರು ಚಿನ್ನ ವಜ್ರ ಸೇರಿದಂತೆ ಹಲವು ಆಭರಣಗಳನ್ನು ಕಳೆದ ವರ್ಷ ಕೊಂಡಿದ್ದು, ಕೆಲವೇ ದಿನಗಳಲ್ಲಿ ಬಡ್ಡಿ ಸೇರಿಸಿ ಹಣ ಮರಳಿಸುವುದಾಗಿ ಹೇಳಿದ್ದರು.ಅಲ್ಲದೇ  ಮುಂಬೈ ನಲ್ಲಿ ಆಸ್ತಿ ಇದ್ದು, ಇದನ್ನು ಮಾರಾಟ ಮಾಡಿದ ಬಳಿಕ ಸಂಪೂರ್ಣ ಹಣ ನೀಡುವುದಾಗಿ ತಿಳಿಸಿದ್ದರು.

'ಅಪ್ಪಾಜಿಗೆ ಕೋಟ್ಯಧಿಪತಿ ಶೋ ತುಂಬಾ ಇಷ್ಟ'!

ಆದರೆ ಒಂದು ವರ್ಷ ಕಳೆದರೂ ಕೂಡ ಗಾಡ್ಗಿಲ್  ಆಭರಣ ಅಂಗಡಿಗೆ ಹಣ ನೀಡದ ಹಿನ್ನೆಲೆ ದೂರು ದಾಖಲಿಸಿದ್ದು,  ಮಿಲಿಂದ್ ವಿರುದ್ಧ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿತ್ತು.ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಪತ್ನಿ ಇಬ್ಬರನ್ನು ಬಂಧಿಸಲಾಗಿದೆ

ಖ್ಯಾತ ನಿರ್ದೇಶಕನಿಂದ 10.ರೂ ಪಡೆದು ಧನ್ಯನಾದ ಶರಣ್!