ವಾಕ್ ಸ್ವಾತಂತ್ರ್ಯ ಎತ್ತಿ ಹಿಡಿಯುವ ಸಲುವಾಗಿ ಪದ್ಮಾವತಿ ಚಿತ್ರವನ್ನು ಬಿಡುಗಡೆ ಮಾಡಲೇಬೇಕು ಎಂದು ಛತ್ತೀಸ್’ಗಢದಲ್ಲಿ ಮಾವೋವಾದಿಗಳು ಭಾನುವಾರ ಆಗ್ರಹಿಸಿದ್ದಾರೆ.

ರಾಯ್ಪುರ(ಡಿ.11): ರಜಪೂತ ಸಮುದಾಯದ ಕರಣಿ ಸೇನೆ ಮತ್ತು ಹಿಂದೂಪರ ಸಂಘಟನೆಗಳು ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದ ವಿವಾದಾತ್ಮಕ `ಪದ್ಮಾವತಿ' ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದರೆ, ವಾಕ್ ಸ್ವಾತಂತ್ರ್ಯ ಎತ್ತಿ ಹಿಡಿಯುವ ಸಲುವಾಗಿ ಈ ಚಿತ್ರವನ್ನು ಬಿಡುಗಡೆ ಮಾಡಲೇಬೇಕು ಎಂದು ಛತ್ತೀಸ್’ಗಢದಲ್ಲಿ ಮಾವೋವಾದಿಗಳು ಭಾನುವಾರ ಆಗ್ರಹಿಸಿದ್ದಾರೆ.

ದಾಂತೇವಾಡ ಜಿಲ್ಲೆಯಲ್ಲಿನ ಕಾಡುಗಳಲ್ಲಿ ದೀಪಿಕಾ ಪಡುಕೋಣೆ ಅವರನ್ನು ಬೆಂಬಲಿಸುವ ಪೋಸ್ಟರ್ ಮತ್ತು ಪಾಂಪ್ಲೆಟ್’ಗಳನ್ನು ನಕ್ಸಲರು ಅಂಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.