ಸಿದ್ದು ವಿದೇಶಕ್ಕೆ ಹೋದಾಗಲೆ 'ಅಕ್ಕ' ಸಮ್ಮೇಳನಕ್ಕೆ ಜಮೀರ್ ಆ್ಯಂಡ್ ಟೀಂ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 28, Aug 2018, 9:52 PM IST
Many Congress MLA attends AKKA Convention 2018
Highlights

ಅಮೆರಿಕದಲ್ಲಿ ಆಗಸ್ಟ್ 31ರಿಂದ ಸೆಪ್ಟೆಂಬರ್ 2ರವರೆಗೆ ನಡೆಯಲಿರುವ ಅಮೆರಿಕ ಕನ್ನಡ ಕೂಟಗಳ ಆಗರ [ಅಕ್ಕ] ಸಮ್ಮೇಳನಕ್ಕೆ ರಾಜ್ಯದಿಂದ ಶಾಸಕರ ದಂಡೆ ತೆರಳಲಿದೆ. ಪಟ್ಟಿಯಲ್ಲಿ ಯಾರು ಯಾರು ಇದ್ದಾರೆ ಅಂತೀರಾ.. ನೋಡಿಕೊಳ್ಳಿ

ಬೆಂಗಳೂರು[ಆ.28]  ಅಮೆರಿಕದಲ್ಲಿ ನಡೆಯಲಿರುವ ಅಕ್ಕ ಸಮ್ಮೇಳನಕ್ಕೆ ಕಾಂಗ್ರೆಸ್‌ನ ಶಾಸಕರ ದೊಡ್ಡ ದಂಡೇ ಹೊರಡಲಿದೆ ಎನ್ನಲಾಗುತ್ತಿದೆ.  ಈವರೆಗೆ ಶಾಸಕರಾದ ಎಸ್‌.ಟಿ. ಸೋಮಶೇಖರ್‌, ಮುನಿರತ್ನ, ಭೈರತಿ ಬಸವರಾಜು ಹಾಗೂ ಭೈರತಿ ಸುರೇಶ್‌ ಅವರು ಅಮೆರಿಕಕ್ಕೆ ತೆರಳಲಿರುವುದು ಖಚಿತಗೊಂಡಿದೆ. ಇವರಲ್ಲದೆ ಸಚಿವ ಜಮೀರ್‌ ಅಹಮದ್‌ ಸೇರಿದಂತೆ ಇನ್ನು ಕೆಲ ಶಾಸಕರು ಅಮೆರಿಕ ಪ್ರವಾಸಕ್ಕೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಅವರು ವಿದೇಶಕ್ಕೆ ತೆರಳಲಿರುವ ಈ ಹಂತದಲ್ಲೇ ಹಲವು ಶಾಸಕರು ವಿವಿಧ ದೇಶಗಳಿಗೆ ತೆರಳಲು ಮುಂದಾಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಲಾಗುತ್ತಿದ್ದು, ಇದು ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆ ತರುವ ಯತ್ನ ಎಂದೇ ಬಿಂಬಿಸಲಾಗುತ್ತಿದೆ.

ಅಮೆರಿಕದಲ್ಲಿ ಕನ್ನಡ ಡಿಂಡಿಮ

ಆದರೆ, ‘ಸುವರ್ಣ ನ್ಯೂಸ್.ಕಾಂ’ ನೊಂದಿಗೆ ಮಾನತಾಡಿದ ವಿದೇಶಕ್ಕೆ ತೆರಳಲಿರುವ ಶಾಸಕರೊಬ್ಬರು, ಪೂರ್ವ ನಿರ್ಧರಿತ ಪ್ರವಾಸವಿದು. ನಾವು ವಿದೇಶಕ್ಕೆ ತೆರಳಲು ಸಿದ್ದತೆ ಮಾಡಿಕೊಂಡಾಗ ಸಿದ್ದರಾಮಯ್ಯ ಅವರ ವಿದೇಶ ಯಾತ್ರೆ ಯೋಜನೆಯೇ ರೂಪುಗೊಂಡಿರಲಿಲ್ಲ. ಇಷ್ಟಕ್ಕೂ ಸಿದ್ದರಾಮಯ್ಯ ಅವರು ಕುಟುಂಬ ಸಮೇತ ವಿದೇಶಕ್ಕೆ ತೆರಳುತ್ತಿದ್ದಾರೆ. ವಿನಾಕಾರಣ ರಾಜಕೀಯ ಬಣ್ಣ ಕಟ್ಟಲಾಗುತ್ತಿದೆ ಎಂದು ತಿಳಿಸಿದರು.

loader