Asianet Suvarna News Asianet Suvarna News

ಬಾಬಾ ಬೆಂಬಲಿಗರ ಗೂಂಡಾಗಿರಿ: ಮನೋಹರ್ ಲಾಲ್ ಖಟ್ಟರ್ ಕುರ್ಚಿಗೆ ಕಂಟಕ?

ಅತ್ಯಾಚಾರ ಪ್ರಕರಣ ತಪ್ಪಿತಸ್ಥ ಬಾಬನ್ನ ಪರ ನಿಂತಿದ್ದಾರೆ ಬಿಜೆಪಿ ನಾಯಕರು, ದೇವಮಾನವ ಮಾಡಿದ್ದು ತಪ್ಪೇ ಅಲ್ಲಾ ಎಂದು ಕಾಮುಕ ಬಾಬನನ್ನ ಸರ್ಮಥಿಸಿಕೊಳುತ್ತಿದ್ದು, ರಾಮ್​ ರಹೀಂ ರಣರಂಗದಲ್ಲಿ ನಡೆದಿದೆ  ಸುರುವಾಗಿದೆ ಬಿಜೆಪಿ ಪಾಲಿಟಿಕ್ಸ್​.

Manoharlal Khattar in danger

ಬೆಂಗಳೂರು(ಆ.26): ಸ್ವಯಂಘೋಷಿತ ದೇವ ಮಾನವ ದೋಷಿ ಎಂದು ತೀರ್ಪು ಬರುತ್ತಲೇ ಅಲ್ಲೋಕಲ್ಲೋವೇ ಸೃಷ್ಟಿಯಾಗಿದೆ. ಪಂಚಕುಲ ಸೇರಿ ಹರಿಯಾಣ, ಪಂಜಾಬ್, ದೆಹಲಿ ಅಕ್ಷರಶಃ ಹೊತ್ತಿ ಉರಿಯುತ್ತಿವೆ. ಅಷ್ಟಕ್ಕೂ ಬಾಬಾ ಸಾಮಾನ್ಯ ವ್ಯಕ್ತಿಯೇನಲ್ಲ. ಲಕ್ಷ ಲಕ್ಷಿ ಬೆಂಬಲಿಗರನ್ನೊಳಗೊಂಡ ದೇವ ಮಾನವನ ಕೇಸ್​ನಲ್ಲಿ  ಭದ್ರತೆ ವಿಚಾರದಲ್ಲಿ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಸರ್ಕಾರ ಎಡವಿದೆ.. ಸಿಎಂ ರಾಜೀನಾಮೆ ಕೊಡಬೇಕು ಅನ್ನೋ ಒತ್ತಡ ಜೋರಾಗಿದೆ.

ಇನ್ನೂ  ಹಿಂಸಾಚಾರ ಭುಗಿಲೇಳುತ್ತಲೇ ಸುದ್ದಿಗೋಷ್ಠಿ  ಕರೆದ ಸಿಎಂ ಕಟ್ಟರ್  ವದಂತಿಗಳಿಗೆ ಕಿಗೊಡಬೇಡಿ. ಶಾಂತಿ ಕಾಪಾಡಿ ಎಂದು ಮನವಿ ಮಾಡ್ಕೊಂಡಿದ್ದಾರೆ. ಸಿಎಂ ಮನವಿಗೈ ಕ್ಯಾರೇ ಎನ್ನದ ಬಾಬಾ ಬೆಂಬಲಿಗರು ಕಾನೂನನ್ನು ಕೈಗೆ ತೆಗೆದುಕೊಂಡು ಗೂಂಡಾಗಿರಿ ಮುಂದುವರಿಸಿದರು.. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಲೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹರಿಯಾಣ ಸಿಎಂಗೆ ದೂರವಾಣಿ ಕರೆ ಮಾಡಿ ಗಲಭೆ ನಿಯಂತ್ರಿಸಿ, ಇಲ್ಲಾ ಹುದ್ದೆ ತೊರೆಯಿರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ. ಇಂದು ಬೆಳಗ್ಗೆ 11 ಗಂಟೆಗೆ ಗೃಹ ಸಚಿವರು ಉನ್ನತ ಮಟ್ಟದ ಸಭೆ ಕರೆದಿದ್ದಾರೆ.

ಇನ್ನೂ ಹರಿಯಾಣದಲ್ಲಿನ ಮಲೆಯಾಳಿಗಳು ತಮಗೆ ರಕ್ಷಣೆ ಕೊಡಿಸುವಂತೆ ಪೋನ್ ಕರೆಗಳು ಬರುತ್ತಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರಧಾನಿಗೆ ಪತ್ರ ಬರೆದಿದ್ದಾರೆ ಎನ್ನಲಾಗ್ತಿದೆ. ಈ ಮಧ್ಯೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಘಟನೆ ನಿಯಂತ್ರಣ ವಿಚಾರದಲ್ಲಿ ಎಡವಿದ ಹರಿಯಾಣ ಸರ್ಕಾರದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ. ಇದೆಲ್ಲರ ಮಧ್ಯೆಯೂ ಬಿಜೆಪಿ ಸಂಸದ ಸಾಕ್ಷಿ ಮಹರಾಜ್ ಅತ್ಯಾಚಾರಿ ಬಾಬಾನ  ಪರವಾಗಿ ಬ್ಯಾಟ್ ಮಾಡಿದ್ದಾರೆ.

ಒಟ್ಟಿನಲ್ಲಿ  ರಾಮ್ ರಹಿಮ್ ಸಿಂಗ್ ಜೈಲು ಸೇರಿದ ಬಳಿಕ ಹರಿಯಾಣದಲ್ಲಿ ಅಲ್ಲೋಕಲ್ಲೋಲ ಸೃಷ್ಟಿಯಾಗಿದ್ದು ರಾಜಕೀಯವಾಗಿಯೂ ಸಾಕಷ್ಟು ಬೆಳವಣಿಗೆಗಳಿಗೆ ಸಾಕ್ಷಿಯಾಗುವ ಲಕ್ಷಣ ಗೋಚರಿಸುತ್ತಿದೆ.

Follow Us:
Download App:
  • android
  • ios