ಪಣಜಿ[ಫೆ.05]: ವಿಶ್ವ ಕ್ಯಾನ್ಸರ್‌ ದಿನದ ಅಂಗವಾಗಿ ಸೋಮವಾರ ಸಂದೇಶವೊಂದನ್ನು ನೀಡಿರುವ ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್‌, ಮನಸ್ಸಿದ್ದರೆ ಯಾವುದೇ ಕಾಯಿಲೆ ಬೇಕಾದರೂ ಗೆಲ್ಲಬಹುದು ಎಂದು ಟ್ವೀಟ್‌ ಮಾಡಿದ್ದಾರೆ.

ಹಲವು ತಿಂಗಳುಗಳಿಂದ ಅನಾರೋಗ್ಯಪೀಡಿತರಾಗಿರುವ ಪರ್ರಿಕರ್‌ ಸದ್ಯ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಂದಲೇ ಟ್ವೀಟ್‌ ಮಾಡಿದ್ದಾರೆ. ಈ ನಡುವೆ, ಪರ್ರಿಕರ್‌ ಅವರಿಗೆ ಆರೋಗ್ಯ ಉತ್ತಮವಾಗಿಲ್ಲ. ದೇವರ ಆಶೀರ್ವಾದದಿಂದ ಅವರು ಬದುಕಿದ್ದಾರೆ. ಅಧಿಕಾರದಿಂದ ಅವರು ಕೆಳಗಿಳಿದರೆ ಅಥವಾ ಅವರಿಗೆ ಏನಾದರೂ ಆದರೆ ಗೋವಾದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಎಂದು ಉಪಸ್ಪೀಕರ್‌ ಮೈಕಲ್‌ ಲೋಬೋ ತಿಳಿಸಿದ್ದಾರೆ.