ಖಾಲಿ ಪಾತ್ರೆಯೇ ಹೆಚ್ಚು ಶಬ್ದ ಮಾಡುತ್ತದೆ ಎನ್ನುವಂತೆ ಸದಾ ಒಂದಿಲ್ಲೊಂದು ವಿಚಾರದಲ್ಲಿ ಪಾಕಿಸ್ತಾನ ಎಂಗೇಜ್ ಆಗಿರುವ ಮೂಲಕ ಸುದ್ದಿ ಮಾಡುತ್ತದೆ ಎಂದು ಮಾಜಿ ರಕ್ಷಣಾ ಸಚಿವ, ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಪಾಕಿಸ್ತಾನವನ್ನು ಟೀಕಿಸಿದ್ದಾರೆ.
ಪಣಜಿ (ಏ.15): ಖಾಲಿ ಪಾತ್ರೆಯೇ ಹೆಚ್ಚು ಶಬ್ದ ಮಾಡುತ್ತದೆ ಎನ್ನುವಂತೆ ಸದಾ ಒಂದಿಲ್ಲೊಂದು ವಿಚಾರದಲ್ಲಿ ಪಾಕಿಸ್ತಾನ ಎಂಗೇಜ್ ಆಗಿರುವ ಮೂಲಕ ಸುದ್ದಿ ಮಾಡುತ್ತದೆ ಎಂದು ಮಾಜಿ ರಕ್ಷಣಾ ಸಚಿವ, ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಪಾಕಿಸ್ತಾನ್ನು ಟೀಕಿಸಿದ್ದಾರೆ.
ಮಾಜಿ ಸೇನಾಧಿಕಾರಿ ಕುಲಭೂಷಣ್ ಜಾಧವ್ ಗೆ ಪಾಕ್ ಸೇನಾ ನ್ಯಾಯಾಲಯ ಗಲ್ಲುಶಿಕ್ಷೆ ನೀಡಿರುವುದನ್ನು ಪ್ರಸ್ತಾಪಿಸುತ್ತಾ, ಕೊಂಕಣಿ, ಹಿಂದಿಯಲ್ಲಿ ಖಾಲಿ ಪಾತ್ರೆ ಹೆಚ್ಚು ಶಬ್ದ ಮಾಡುತ್ತದೆ ಅಂತ ಒಂದು ಗಾದೆ ಮಾತಿದೆ. ಪಾಕ್ ಮಾತಿಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲವೆಂದು ಡಿಡಿ ನ್ಯೂಸ್ ಗೆ ನೀಡಿದ ಸಂದರ್ಶನವೊಂದರಲ್ಲಿ ಪರ್ರಿಕರ್ ಹೇಳಿದ್ದಾರೆ.
ಪಾಕಿಸ್ತಾನ ಏನಾದರೂ ವಿಚಾರ ತೆಗೆದು ಸದಾ ಎಂಗೇಜ್ ಆಗಿರಲು ಇಚ್ಚಿಸುತ್ತದೆ. ಭಾರತದ ಜೊತೆ ಆಟವಾಡುತ್ತಿದೆ. ಪಾಕಿಸ್ತಾನ ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು. ಒಂದುವೇಳೆ ಭಾರತ ತಿರುಗಿ ನಿಂತರೆ ನಮ್ಮ ವಿರುದ್ಧ ಹೋರಾಡಲು ಅವರಿಗೆ ಶಕ್ತಿಯಿಲ್ಲ. ಆದರೆ ನಾವು ಶಾಂತಿಯನ್ನು ಬಯಸುತ್ತೇವೆ. ಪ್ರಚೋದಿಸಲು ಬಯಸುವುದಿಲ್ಲ. ಹಾಗಾಗಿ ಜಾಧವ್ ರನ್ನು ನಮಗೆ ಹಿಂತಿರುಗಿಸಬೇಕು ಎಂದು ಪರ್ರಿಕರ್ ಹೇಳಿದ್ದಾರೆ.
ಜಾಧವ್ ರನ್ನು ಅಪಹರಿಸಲಾಗಿದೆ. ಅವರು ಪಾಕಿಸ್ತಾನದಲ್ಲಿಲ್ಲ. ಇರಾನ್ ನಲ್ಲಿದ್ದಾರೆ.ತಾಲಿಬಾನ್ ಅವರನ್ನು ಕಿಡ್ನಾಪ್ ಮಾಡಿ ಪಾಕಿಸ್ತಾನಕ್ಕೆ ಕರೆತಂದಿದೆ ಎಂದು ಇರಾನ್ ಹೇಳಿದೆ. ನಾವು ಸುಮ್ಮನಿರಲ್ಲ. ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಪರ್ರಿಕರ್ ಹೇಳಿದ್ದಾರೆ.
