ದೆಹಲಿಯ ನಿರ್ಭಯಾ ಅತ್ಯಾಚಾರದ ಬಳಿಕ ದೇಶಾದ್ಯಂತ ಸಂಚಲ ಮೂಡಿಸಿದ ಮತ್ತೊಂದು ಪ್ರಕರಣವೆಂದರೆ ಬೆಂಗಳೂರಲ್ಲಿ ಹೊಸ ವರ್ಷದ ಸಂಭ್ರಮದ ಮಧ್ಯೆ ನಡೆದ ಲೈಗಿಕ ದೌರ್ಜನ್ಯ. ಘಟನೆ ವೇಳೆ ಕೈ ಚೆಲ್ಲಿ ಕುಳಿತ ಬೆಂಗಳೂರು ಪೊಲೀಸರು ಸುವರ್ಣ ನ್ಯೂಸ್ ವರದಿ ಬಳಿಕವೂ ಎಚ್ಚೆತ್ತುಕೊಳ್ಳಲೇ ಇಲ್ಲ. ಇದು ವಿಶ್ವದ ಮುಂದೆ ಬೆಂಗಳೂರು ಶೇಮ್ ಶೇಮ್ ಅನಿಸಿಕೊಂಡ ಘಟನೆ.
ಬೆಂಗಳೂರು(ಜ.03): ದೆಹಲಿಯ ನಿರ್ಭಯಾ ಅತ್ಯಾಚಾರದ ಬಳಿಕ ದೇಶಾದ್ಯಂತ ಸಂಚಲ ಮೂಡಿಸಿದ ಮತ್ತೊಂದು ಪ್ರಕರಣವೆಂದರೆ ಬೆಂಗಳೂರಲ್ಲಿ ಹೊಸ ವರ್ಷದ ಸಂಭ್ರಮದ ಮಧ್ಯೆ ನಡೆದ ಲೈಗಿಕ ದೌರ್ಜನ್ಯ. ಘಟನೆ ವೇಳೆ ಕೈ ಚೆಲ್ಲಿ ಕುಳಿತ ಬೆಂಗಳೂರು ಪೊಲೀಸರು ಸುವರ್ಣ ನ್ಯೂಸ್ ವರದಿ ಬಳಿಕವೂ ಎಚ್ಚೆತ್ತುಕೊಳ್ಳಲೇ ಇಲ್ಲ. ಇದು ವಿಶ್ವದ ಮುಂದೆ ಬೆಂಗಳೂರು ಶೇಮ್ ಶೇಮ್ ಅನಿಸಿಕೊಂಡ ಘಟನೆ.
ಮತ್ತೊಮ್ಮೆ ದೇಶದ ಎದುರು ರಾಜ್ಯದ ಮಾನ ಹರಾಜು: ಹದ್ದು ಮೀರಿ ವರ್ತಿಸಿದವರ ವಿರುದ್ಧ ಯಾಕಿಷ್ಟು ಮೌನ?
ರಾಜ್ಯ ರಾಜಧಾನಿಯ ಎಂಜಿ ರೋಡ್'ನಲ್ಲಿ ನಡೆದ ಕಾಮಚೇಷ್ಠೆ ದೇಶದ ಎದುರೇ ರಾಜ್ಯ ತಲೆ ತಗ್ಗಿಸುವಂತೆ ಮಾಡಿದೆ. ಈ ಕುರಿತಾಗಿ ಮೊಟ್ಟ ಮೊದಲು ಸುದ್ದಿ ಪ್ರಸಾರ ಮಾಡಿದ್ದೇ ಸುವರ್ಣ ನ್ಯೂಸ್. ಈ ಅಸಹ್ಯ ಘಟನೆ ನಡೆದು ಎರಡು ದಿನಗಳು ಕಳೆದರೂ ಯಾರೊಬ್ಬರ ಬಂಧನವಾಗಿಲ್ಲ. ಇದು ಪೊಲೀಸ್ ಇಲಾಖೆಗೆ ಶೇಮ್ ಶೇಮ್.
ಲಕ್ಷಾಂತರ ಮಂದಿ ನ್ಯೂ ಇಯರ್ ಆಚರಣೆಗೆ ಬಂದಿದ್ದರು. ಭದ್ರತೆಗೆ ನಿಯೋಜನೆಗೊಂಡಿದ್ದು ಸುಮಾರು 6 ಸಾವಿರ ಪೊಲೀಸರು. 300 ಸಿಸಿ ಕ್ಯಾಮರಾಗಳ ಕಣ್ಗಾವಲು. ಇಷ್ಟಾದರೂ ಮದಿರೆ ಮತ್ತಿನಲ್ಲಿ ಪೋಲಿಗಳು ಆಡಿದ್ದೇ ಆಟ. ಸಂಭ್ರಮಾಚರಣೆಗೆ ನೀಡಿದ್ದ ಡೆಡ್ಲೈನ್ ರಾತ್ರಿ 2 ಗಂಟೆಗೆ ಮುಗಿದರೂ ಜನ ಅಲ್ಲಿಂದ ತೆರಳಲೇ ಇಲ್ಲ. ಆದರೂ ಪೊಲೀಸರು ಯಾರೊಬ್ಬರನ್ನೂ ಚದುರಿಸಲಿಲ್ಲ. ಗುಂಪಿನಲ್ಲಿ ಕಿಡಿಗೇಡಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ. ಯುವತಿಯರು ಕಣ್ಣೀರಿಟ್ಟಿದ್ದಾರೆ, ರಕ್ಷಣೆಗೆ ಗೋಗರೆದಿದ್ದಾರೆ. ಇದೆಲ್ಲವನ್ನೂ ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು. ಇಷ್ಟಾದರೂ ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಜವಾಬ್ದಾರಿ ಹೊಣೆ ಹೊತ್ತ ನೂತನ ಕಮಿಷನರ್ ಹೂಗುಚ್ಛ ಸ್ವೀಕರಿಸಿ ಓಡಾಡಿಕೊಂಡಿದ್ದರು
ಸುವರ್ಣ ನ್ಯೂಸ್ ವರದಿ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ
ಸುವರ್ಣ ನ್ಯೂಸ್ ವರದಿ ಬಳಿಕ ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲೂ ಭಾರೀ ಸುದ್ದಿಯಾಗಿದೆ. ಯಾವಾಗ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮಾನ ಹರಾಜಾಯಿತೋ. ಎಚ್ಚೆತ್ತ ಪೊಲೀಸ್ ಇಲಾಖೆ ಹೆಚ್ಚುವರಿ ಪೊಲೀಸ್ ಆಯುಕ್ತೆ, ಮಾಲಿನಿ ಕೃಷ್ಣಮೂರ್ತಿ ನೇತೃತ್ವದಲ್ಲಿ ತಂಡ ರಚಿಸಿದೆ. ಎಂಜಿ ರಸ್ತೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲಿನೆ ನಡೆಯುತ್ತಿದೆ.
ಒಟ್ಟಿನಲ್ಲಿ ತಡವಾಗಿದೆಯಾದರೂ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ ಎನ್ನುವ ಸಮಾಧಾನ ಇದೆ. ಆದರೆ ಕಾಮುಕರನ್ನು ಯಾವಾಗ ಬಂಧಿಸುತ್ತಾರೋ ತಿಳಿದಿಲ್ಲ.
