ನವದೆಹಲಿ[ಆ.11]: ಮಾಜಿ ಪ್ರಧಾನಿ, ಕಾಂಗ್ರೆಸ್‌ ಹಿರಿಯ ನಾಯಕ ಮನಮೋಹನ್‌ ಸಿಂಗ್‌ ಅವರು ರಾಜಸ್ಥಾನದಿಂದ ರಾಜ್ಯಸಭೆ ಪ್ರವೇಶ ಮಾಡುವುದು ಖಚಿತವಾಗಿದ್ದು, ಆ.13ಕ್ಕೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ರಾಜ್ಯಸಭೆ ಸದಸ್ಯರಾಗಿದ್ದ ಬಿಜೆಪಿಯ ಮದನ್‌ಲಾಲ್‌ ಸೈನಿ ಅವರ ನಿಧನದಿಂದ ಸ್ಥಾನ ತೆರವಾಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿ ಚುನಾವಣೆ ಆಯೋಜನೆಗೊಂಡಿದೆ.

ಮನಮೋಹನ್‌ ಸಿಂಗ್‌ ಅವರು 28 ವರ್ಷಗಳಿಂದ ಅಸ್ಸಾಂ ಮೂಲಕ ರಾಜ್ಯಸಭೆ ಪ್ರತಿನಿಧಿಸುತ್ತಿದ್ದರು. ಈ ವರ್ಷದ ಆರಂಭದಲ್ಲಿ ಅವರ ರಾಜ್ಯಸಭೆ ಅವಧಿ ಮುಗಿದಿತ್ತು. ಆದರೆ ಅಸ್ಸಾಂನಿಂದ ಸಿಂಗ್‌ರನ್ನು ಆರಿಸುವಷ್ಟುಬಲ ಕಾಂಗ್ರೆಸ್‌ಗೆ ಇಲ್ಲದ ಕಾರಣ ಅವರು ಅಲ್ಲಿ ಕಣಕ್ಕೆ ಇಳಿದಿರಲಿಲ್ಲ.