ಉದ್ಯಮಿ ವಿಜಯ್ ಮಲ್ಯರವರು ಸಾಲ ಪಡೆಯಲು ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸಹಾಯ ಮಾಡಿದ್ದರು ಎಂದು ಭಾರತೀಯ ಜನತಾ ಪಕ್ಷ ಇಂದು ಆರೋಪಿಸಿದೆ.

ನವದೆಹಲಿ (ಜ.30): ಉದ್ಯಮಿ ವಿಜಯ್ ಮಲ್ಯರವರು ಸಾಲ ಪಡೆಯಲು ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸಹಾಯ ಮಾಡಿದ್ದರು ಎಂದು ಭಾರತೀಯ ಜನತಾ ಪಕ್ಷ ಇಂದು ಆರೋಪಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2011 ಮತ್ತು 2013 ರಲ್ಲಿ ವಿಜಯ್ ಮಲ್ಯ ಅಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹಾಗೂ ವಿತ್ತ ಸಚಿವರಾಗಿದ್ದ ಪಿ.ಚಿದಂಬರಂರವರಿಗೆ ಸಾಲ ಪಡೆಯಲು ನೆರವಾಗುವಂತೆ ಕೋರಿ ಪತ್ರ ಬರೆದಿದ್ದರು. ನಂತರ ಸರ್ಕಾರ ಸಾಲ ಪಡೆಯಲು ನೆರವು ನೀಡಿತು. ಮನಮೋಹನ್ ಸಿಂಗ್ ಒತ್ತಾಯದ ಮೇರೆಗೆ ಮಲ್ಯರಿಗೆ ಸಾಲ ನೀಡಲಾಗಿತ್ತು. ಜೊತೆಗೆ ಆದಾಯ ತೆರಿಗೆ ಇಲಾಖೆ ಇವರ ಖಾತೆಗಳ ಬಗ್ಗೆ ನಿಗಾಯಿಟ್ಟಿರಲಿಲ್ಲ ಎಂದು ಬಿಜೆಪಿ ಆರೋಪಿಸಿದೆ.

ಬೃಹತ್ ಮೊತ್ತವನ್ನು ವಿಜಯ್ ಮಲ್ಯ ಎಲ್ಲಿಂದ ಸಂಗ್ರಹಿಸಿದರು? ಮುಳುಗುತ್ತಿರುವ ಹಡಗು (ಕಾಂಗ್ರೆಸ್) ಮುಳುಗುತ್ತಿರುವ ಕಿಂಗ್ ಫಿಶರ್ ಗೆ ಸಹಾಯ ಮಾಡಿತ್ತೇ? ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಪ್ರಶ್ನಿಸಿದ್ದಾರೆ.