Asianet Suvarna News Asianet Suvarna News

ಕೇಜ್ರಿವಾಲ್ ಪಂಜಾಬ್ ಸಿಎಂ ಅಭ್ಯರ್ಥಿಯಂತೆ! ಹಾಗಾದರೆ ದೆಹಲಿಗೆ ಯಾರು ?

ನಾನು ಏನು ಭರವಸೆ ನೀಡಿದರೂ ಅದನ್ನು ಅವರು ಈಡೇರಿಸುತ್ತಾರೆ,’’ ಎಂದು ಹೇಳಿದ್ದಾರೆ. ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಯಾರಾದರೂ ಭರವಸೆಗಳನ್ನು ಈಡೇರಿಸುವ ಹೊಣೆ ಅರವಿಂದ ಕೇಜ್ರಿವಾಲ್‌ರದ್ದು ಎಂದು ಹೇಳಲು ದೆಹಲಿ ಡಿಸಿಎಂ ಸಿಸೋಡಿಯಾ ಮರೆಯಲಿಲ್ಲ.

Manish Sisodia hints at Arvind Kejriwal for Panjab CM

ಮೊಹಾಲಿ/ನವದೆಹಲಿ(ಜ.11): ಆಮ್ ಆದ್ಮಿ ಪಕ್ಷದ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪಂಜಾಬ್‌ನ ಮುಖ್ಯಮಂತ್ರಿಯಾಗಲಿದ್ದಾರೆಯೇ? ಹೀಗೊಂದು ಸುಳಿವನ್ನು ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ನೀಡಿದ್ದಾರೆ. ಪಂಜಾಬ್‌ನ ಮೊಹಾಲಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಸೋಡಿಯಾ ‘‘ಪಂಜಾಬ್‌ನ ಮತದಾರರು ಹಕ್ಕು ಚಲಾವಣೆಯ ದಿನ ಅರವಿಂದ ಕೇಜ್ರಿವಾಲ್‌ರನ್ನು ಮುಖ್ಯಮಂತ್ರಿ ಮಾಡಲು ಮತ ಹಾಕುತ್ತಿದ್ದೇವೆ ಎಂದು ಭಾವಿಸಬೇಕು.

ನಾನು ಏನು ಭರವಸೆ ನೀಡಿದರೂ ಅದನ್ನು ಅವರು ಈಡೇರಿಸುತ್ತಾರೆ,’’ ಎಂದು ಹೇಳಿದ್ದಾರೆ. ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಯಾರಾದರೂ ಭರವಸೆಗಳನ್ನು ಈಡೇರಿಸುವ ಹೊಣೆ ಅರವಿಂದ ಕೇಜ್ರಿವಾಲ್‌ರದ್ದು ಎಂದು ಹೇಳಲು ದೆಹಲಿ ಡಿಸಿಎಂ ಸಿಸೋಡಿಯಾ ಮರೆಯಲಿಲ್ಲ.

ಕಾರ್ಯಕ್ರಮದ ಬಳಿಕ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ ‘‘ಮುಖ್ಯಮಂತ್ರಿ ಯಾರಾಗಬೇಕೆನ್ನುವುದನ್ನು ಶಾಸಕರೇ ನಿರ್ಧರಿಸುತ್ತಾರೆ. ಆ ವಿಚಾರವನ್ನು ನನ್ನ ಬಳಿ ಏಕೆ ಕೇಳುತ್ತೀರಿ,’’ ಎಂದರು ಸಿಸೋಡಿಯಾ. ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ಸಿಗದೇ ಇರುವುದರಿಂದ ಅರವಿಂದ ಕೇಜ್ರಿವಾಲ್ ಪಂಜಾಬ್‌ನತ್ತಲೇ ಮುಖ ಮಾಡಿದ್ದಾರೆ. 2015ರಲ್ಲಿ ಎರಡನೇ ಬಾರಿಗೆ ದೆಹಲಿಯಲ್ಲಿ ಗೆದ್ದ ಬಳಿಕ ಹೆಚ್ಚಿನ ಖಾತೆಗಳನ್ನು ಮನೀಶ್ ಸಿಸೋಡಿಯಾಗೆ ವಹಿಸಿ ಆ ರಾಜ್ಯದತ್ತಲೇ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಆದರೆ ದೆಹಲಿ ಸಿಎಂ ಸ್ಥಾನವನ್ನು ಕೇಜ್ರಿವಾಲ್ ತ್ಯಜಿಸಲಿದ್ದಾರೆಂಬ ವದಂತಿಯನ್ನು ಆಪ್ ತಿರಸ್ಕರಿಸಿದೆ.

Latest Videos
Follow Us:
Download App:
  • android
  • ios