ಫಿಲಿಫೇನ್ಸ್​ನಲ್ಲಿ ಅಮೆರಿಕ ಸೇನಾ ಕಾರ್ಯಾಚರಣೆ ಮತ್ತು ಅಮೆರಿಕದ ಜೊತೆ ಹಲವು ಒಪ್ಪಂದಗಳನ್ನು ವಿರೋಧಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯುತ್ತಿತ್ತು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪ್ರತಿಭಟನಾಕಾರರ ಮೇಲೆ ವ್ಯಾನ್ ಹರಿಸಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ,ಘಟನೆಯಲ್ಲಿ 50 ಮಂದಿ ಗಂಭೀರ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನಿಲಾ(ಅ.19): ಫಿಲಿಫೇನ್ಸ್​ನಲ್ಲಿ ಪೊಲೀಸರು ಅಂಧಾ ದರ್ಬಾರ್ ನಡೆಸಿದ್ದಾರೆ. ಫಿಲಿಫೇನ್ಸ್​ನ ಮನೀಲಾದಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಮುಂದೆ ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸ್ ವ್ಯಾನ​ನ್ನೇ ಪ್ರತಿಭಟನಾಕಾರರ ಮೇಲೆ ಹರಿಸಿ ರಾಕ್ಷಸ ಕೃತ್ಯವೆಸಗಿದ್ದಾರೆ.