ಪ್ರಧಾನಿ ಮೋದಿ ಬಗ್ಗೆ 'ನೀಚ' ಎಂದು ಪದ ಬಳಕೆ ಮಾಡಿ ಕಾಂಗ್ರೆಸ್.ನಿಂದ ಉಚ್ಚಾಟಿತರಾಗಿರುವ ಮಣಿ ಶಂಕರ್ ಅಯ್ಯರ್ ವಿರುದ್ಧ ಮೋದಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು (ಡಿ.08): ಪ್ರಧಾನಿ ಮೋದಿ ಬಗ್ಗೆ 'ನೀಚ' ಎಂದು ಪದ ಬಳಕೆ ಮಾಡಿ ಕಾಂಗ್ರೆಸ್.ನಿಂದ ಉಚ್ಚಾಟಿತರಾಗಿರುವ ಮಣಿ ಶಂಕರ್ ಅಯ್ಯರ್ ವಿರುದ್ಧ ಮೋದಿ ಗಂಭೀರ ಆರೋಪ ಮಾಡಿದ್ದಾರೆ.
"ನಾನು ಪ್ರಧಾನಿಯಾದ ಸಂದರ್ಭದಲ್ಲಿ ಮಣಿಶಂಕರ್ ಅಯ್ಯರ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಭೇಟಿ ಸಂದರ್ಭದಲ್ಲಿ ಮಾತನಾಡುತ್ತಾ, ಮೋದಿಯವರು ಪ್ರಧಾನಿಯಾಗಿರುವವರೆಗೂ ಭಾರತ-ಪಾಕಿಸ್ತಾನ ಸಂಬಂಧ ಉತ್ತಮವಾಗಿರುವುದಿಲ್ಲ. ಅವರನ್ನು ದಾರಿಯಿಂದ ತೆಗೆದುಬಿಡಿ ಎಂದು ಹೇಳಿದ್ದಾರೆ. ಇವರ ಮಾತುಗಳೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ. ಕಾಂಗ್ರೆಸ್ ಇದನ್ನು ಮುಚ್ಚಿ ಹಾಕಿದ್ದು, ಮಣಿಶಂಕರ್ ಅಯ್ಯರ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ನಾನೇನು ಅಪರಾಧ ಮಾಡಿದ್ದೇನೆ? ಪ್ರಜಾಪ್ರಭುತ್ವದ ರೀತಿಯಲ್ಲಿ ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ. ನೀವು ಪಾಕಿಸ್ತಾನಕ್ಕೆ ಹೋಗಿ ಈ ಮನುಷ್ಯನನ್ನು ದಾರಿಯಿಂದ ತೆಗೆದು ಬಿಡಿ ಎನ್ನುತ್ತೀರಿ. ನನ್ನನ್ನು ಮುಗಿಸಲು ಬಯಸಿದ್ದೀರಾ ಎಂದು ಮೋದಿ ಮಣಿಶಂಕರ್ ಅಯ್ಯರ್'ನನ್ನು ಪ್ರಶ್ನಿಸಿದ್ದಾರೆ.
