ಪಾಕಿಸ್ತಾನ ಎಂದರೆ ನನಗೆ ತುಂಬ ಇಷ್ಟ ಎಂದ ಕಾಂಗ್ರೆಸ್ ಹಿರಿಯ ಮುಖಂಡ

First Published 12, Feb 2018, 8:21 PM IST
Mani Shankar Aiyar courts controversy again
Highlights

ಭಾರತದಂತೆಯೇ ಪಾಕಿಸ್ತಾನವನ್ನು ಇಷ್ಟಪಡುತ್ತೇನೆ. ಭಾರತ ಕೂಡ ನ್ನ ನೆರೆಯವರನ್ನು ನ್ನಂತೆಯೇ ಪ್ರೀತಿಸಬೇಕು.

ನವದೆಹಲಿ(ಫೆ.12): ಇತ್ತೀಚಿಗಷ್ಟೆ ಪ್ರಧಾನಿ ನರೇಂದ್ರ ಮೋದಿಯನ್ನು ನೀಚ ಮನುಷ್ಯ ಎಂದು ಜರಿದು ಪಕ್ಷದಿಂದ ಶಿಕ್ಷೆಗೆ ಗುರಿಯಾಗಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಮತ್ತೊಮ್ಮೆ ಪಾಕಿಸ್ತಾನ ನನಗೆ ಭಾರತದಂತೆಯೆ ಪ್ರಿಯವಾದ ದೇಶ ಎಂದು ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ.

ಕರಾಚಿಯ ಸಮಾರಂಭದಲ್ಲಿ ಮಾತನಾಡಿದ ಅವರು, ನಿರಂತರ ಮಾತುಕತೆಯ ಮೂಲಕ ಎರಡೂ ದೇಶಗಳು ಸಂಬಂಧವನ್ನು ಸುಧಾರಿಸಿಕೊಳ್ಳಬಹುದು. ಸೌಹಾರ್ದಯುತ ಮಾತುಕತೆಯೊಂದೆ ಭಾರತ - ಪಾಕಿಸ್ತಾನ ಸ್ನೇಹವೃದ್ಧಿಗೆ ಪರಿಹಾರ ಎಂದು ಹೇಳಿದರು.

ಭಾರತದಂತೆಯೇ ಪಾಕಿಸ್ತಾನವನ್ನು ಇಷ್ಟಪಡುತ್ತೇನೆ. ಭಾರತ ಕೂಡ ತನ್ನ ನೆರೆಯವರನ್ನು ತನ್ನಂತೆಯೇ ಪ್ರೀತಿಸಬೇಕು. ಕಾಶ್ಮೀರ ಹಾಗೂ ಭಯೋತ್ಪಾದನೆ ಎರಡೂ ದೇಶಗಳಿಗೂ ತೊಡಕಾಗಿರುವ ಪ್ರಮುಖ ಸಮಸ್ಯೆ' ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಪ್ ಆಡಳಿತದಲ್ಲಿ ಎರಡೂ ದೆಶಗಳ ಸಂಬಂಧ ಸುಧಾರಣೆಗೆ ಉತ್ತಮ ವೇದಿಕೆ ಕಲ್ಪಿಸಲಾಗಿತ್ತು'ಎಂದು ಹಳೆಯ ನೆನಪುಗಳನ್ನು ನೆನಪಿಸಿಕೊಂಡರು.

loader