ಕೊಪ್ಪಳ(ಅ.05): ಲಂಚದ ಹಣಕ್ಕಾಗಿ ಮಾಂಗಲ್ಯ ಸರವನ್ನು ಅಡವಿಡಲು ಮುಂದಾಗಿರುವ ಪ್ರಕರಣವೊಂದು ಕೊಪ್ಪಳದಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಲೂಕಿನ ಮೈನಹಳ್ಳಿ ಗ್ರಾಮದಲ್ಲೊಂದು ಇಡೀ ಸಮಾಜವೇ ತೆಲೆತೆಗ್ಗಿಸುವ ಪ್ರಕರಣವೊಂದು ನಡೆದಿದೆ. ಈ ಗ್ರಾಮದಲ್ಲಿ ಹನುಮಂತಪ್ಪ ಹಾಗೂ ದ್ರಾಕ್ಷಾಯಣಿ ಎನ್ನುವ ಬಡದಂಪತಿ ಕಳೆದ 40 ವರ್ಷಳಿಂದ ಜೀವನ ಸಾಗಿಸುತ್ತಿದೆ. 

ಅದರೆ ಇವರಿಗೊಂದು ಸ್ವತಃ ಸೂರಿಲ್ಲ. ಈ ಹಿನ್ನಲೆಯಲ್ಲಿ ಕಾಡಿ ಬೇಡಿ ಕಳೆದ ಎಪ್ರೀಲ್ ತಿಂಗಳಲ್ಲಿ ದ್ರಾಕ್ಷಾಯಣಿ ಹೆಸರಿನಲ್ಲಿ ಅಂಬೇಡ್ಕರ್ ವಸತಿ ಯೋಜನೆಯಡಿ 1.50 ಲಕ್ಷ ಮೊತ್ತದ ಆಶ್ರಯ ಮನೆಯನ್ನು ಗ್ರಾಮ ಪಂಚಾಯತಿಯವರು ಹಂಚಿಕೆ ಮಾಡಿದರು.

ಆದರೆ ಈಗ ಹಣ ಬಿಡುಗಡೆಗೆ 30 ಸಾವಿರ ದುಡ್ಡು ಕೇಳುತ್ತಿದ್ದು, ಮಂಗಲ್ಯ ಸರವನ್ನೇ ಗಿರಿವಿ ಇಡುವ ಪರಿಸ್ಥಿತಿ ಬಂದಿದೆ.