ಗರ್ಭಿಣಿಗೆ ಬೇರೆ ಔಷಧಿ ಇಂಜೆಕ್ಟ್ ಮಾಡಲು ಯತ್ನ! ಎಚ್ಚೆತ್ತ ಗರ್ಭಿಣಿಯನ್ನು ನೋಡಿ ಎಸ್ಕೇಪ್ !

First Published 23, Jan 2018, 9:58 AM IST
Mangaluru Danger Hospital
Highlights

ಆಸ್ಪತ್ರೆ ಸಿಬ್ಬಂದಿಯೋರ್ವ ಹೆರಿಗೆ ಕೋಣೆಗೆ ಪ್ರವೇಶಿಸಿ, ಗರ್ಭಿಣಿಗೆ ಇನ್ಯಾವುದೋ  ಔಷಧಿ ಇಂಜೆಕ್ಟ್ ಮಾಡಲು ಮುಂದಾದ ಘಟನೆ ಮಂಗಳೂರಿನ ಕೊಲಾಸೋ ಆಸ್ಪತ್ರೆಯಲ್ಲಿ ನಡೆದಿದೆ.

ಮಂಗಳೂರು (ಜ.22): ಆಸ್ಪತ್ರೆ ಸಿಬ್ಬಂದಿಯೋರ್ವ ಹೆರಿಗೆ ಕೋಣೆಗೆ ಪ್ರವೇಶಿಸಿ, ಗರ್ಭಿಣಿಗೆ ಇನ್ಯಾವುದೋ  ಔಷಧಿ ಇಂಜೆಕ್ಟ್ ಮಾಡಲು ಮುಂದಾದ ಘಟನೆ ಮಂಗಳೂರಿನ ಕೊಲಾಸೋ ಆಸ್ಪತ್ರೆಯಲ್ಲಿ ನಡೆದಿದೆ.

ಪುತ್ತೂರಿನ ಆರೀಫಾ ಹೆರಿಗೆಗೆ ಅಂತ ಕೊಲಾಸೋ ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆ ವಾರ್ಡ್​ನಲ್ಲಿ ಆರೀಫಾಗೆ ಗ್ಲೂಕೋಸ್  ಡ್ರಿಪ್ಸ್ ಹಾಕಲಾಗಿತ್ತು. ಈ ವೇಳೆ ಆಸ್ಪತ್ರೆಯ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡ್ತಿದ್ದ  ಸಂದೇಶ್ ಎಂಬಾತ ಅಕ್ರಮವಾಗಿ ಹೆರಿಗೆ ವಾರ್ಡ್​ ಪ್ರವೇಶ ಮಾಡಿದ್ದಾನೆ. ಅಲ್ಲದೆ ಗ್ಲೂಕೋಸ್ ಡ್ರಿಪ್ಸ್ ಬಾಟಲ್'ಗೆ ಸಿರೀಂಜ್ ಮೂಲಕ ಇನ್ಯಾವುದೋ ಔಷಧಿ ಇಂಜೆಕ್ಟ್ ಮಾಡೋಕೆ ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಎಚ್ಚರಗೊಂಡ ಗರ್ಭಿಣಿ ಆರೀಫಾ ಅದನ್ನು ಪ್ರಶ್ನಿಸಿದ್ದಾರೆ. ಅಷ್ಟರಷ್ಟೇ ಸಂದೇಶ್ ಹೊರಗೆ ಓಡಿಹೋಗಿದ್ದಾನೆ. ನಂತರ ಮಹಿಳೆಯ ಪತಿ ಬಂದು ಸಂದೇಶ್'​ನನ್ನು ಪ್ರಶ್ನಿಸಿದಾಗ ಕ್ಷಮೆ ಕೋರಿ ತಪ್ಪಿಸಿಕೊಂಡಿದ್ದಾನೆ. ಇದರಿಂದ ಆತಂಕಗೊಂಡಿರುವ ಆರೀಫಾ ಕುಟುಂಬಸ್ಥರು ಕದ್ರಿ ಠಾಣೆಗೆ ದೂರು ನೀಡಿದ್ದಾರೆ. ಆದರೆ  ಹೆರಿಗೆ ಕೋಣೆಗೆ ನುಗ್ಗಿ ಸಂದೇಶ್ ಬೇರೆ ಔಷಧಿ ನೀಡಲು ಮುಂದಾಗಿದ್ಯಾಕೆ ಅನ್ನೋದು ಮಾತ್ರ ತಿಳಿದುಬಂದಿಲ್ಲ.

loader