MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • 2ನೇ ಮಹಡಿಯಿಂದ ಜಿಗಿದ SSLC ವಿದ್ಯಾರ್ಥಿ; ನಿನ್ನೆಯೇ ಅಪ್ಪನಿಗೆ ವಿಷಯ ಹೇಳಿದ್ದ ಮಗ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

2ನೇ ಮಹಡಿಯಿಂದ ಜಿಗಿದ SSLC ವಿದ್ಯಾರ್ಥಿ; ನಿನ್ನೆಯೇ ಅಪ್ಪನಿಗೆ ವಿಷಯ ಹೇಳಿದ್ದ ಮಗ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಚಿತ್ರದುರ್ಗದ ಭರಮಸಾಗರ ಗ್ರಾಮದ ಡಿವಿಎಸ್ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಕೊಟ್ರೇಶ್, ಹಾಸ್ಟೆಲ್ ವಾರ್ಡನ್ ಕಿರುಕುಳದಿಂದ ನೊಂದು ಶಾಲಾ ಕಟ್ಟಡದ ಎರಡನೇ ಮಹಡಿಯಿಂದ ಜಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

1 Min read
Author : Mahmad Rafik
Published : Feb 16 2026, 12:32 PM IST
Share this Photo Gallery
  • FB
  • TW
  • Linkdin
  • Whatsapp
15
 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ
Image Credit : Asianet News

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ

ಚಿತ್ರದುರ್ಗ ಭರಮಸಾಗರ ಗ್ರಾಮದ ಡಿವಿಎಸ್ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಎರಡನೇ ಮಹಡಿಯಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾನೆ. ಕೊಟ್ರೇಶ್ (16) ಮೃತ ವಿದ್ಯಾರ್ಥಿ. ಇಂದು ಬೆಳಗ್ಗೆ ಘಟನೆ ನಡೆದಿದ್ದು, ವಿದ್ಯಾರ್ಥಿ ಕಟ್ಟಡದಿಂದ ಜಿಗಿಯುತ್ತಿರುವ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

25
ಹಾಸ್ಟೆಲ್ ವಾರ್ಡನ್ ಕಿರುಕುಳ
Image Credit : Asianet News

ಹಾಸ್ಟೆಲ್ ವಾರ್ಡನ್ ಕಿರುಕುಳ

ಕರಿಯಮ್ಮನಹಳ್ಳಿಯ ಗುರುಲಿಂಗಯ್ಯ ಎಂಬವರ ಮಗ ಕೊಟ್ರೇಶ್, ಭ್ರಮಸಾಗರದ ಡಿವಿಎಸ್ ವಸತಿ ಶಾಲೆಯಲ್ಲಿ ಓದುತ್ತಿದ್ದನು. ಮಗನ ಸಾವಿಗೆ ಹಾಸ್ಟೆಲ್ ವಾರ್ಡನ್ ದೀಪಾ, ನಾಗರಾಜ್, ಪ್ರಿನ್ಸಿಪಾಲ್ ಸುಶ್ಮಿತಾ ಮತ್ತು ಆಡಳಿತ ಮಂಡಳಿಯೇ ಕಾರಣ ಎಂದು ಗುರುಲಿಂಗಯ್ಯ ಆರೋಪಿಸಿದ್ದಾರೆ. ಈ ಸಂಬಂಧ ಗುರುಲಿಂಗಯ್ಯ ಅವರು ಭರಮಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related Articles

Related image1
ಗಂಡನೂ ಇಲ್ಲ, ಡೇವಿಡ್ಡೂ ಸಿಗಲಿಲ್ಲ: ಪೊಲೀಸ್ ಠಾಣೆಯಿಂದ ಹೋಗಿದ್ದೆಲ್ಲಿಗೆ ಡ್ರಾಮಾ ಕ್ವೀನ್ ಪ್ರಿಯಾಂಕಾ!
Related image2
ಚಾಮರಾಜನಗರ: ಕುಡಿದು ವಾಹನ ಚಲಾಯಿಸಿದ್ದ ಆಟೋ ಚಾಲಕನಿಗೆ ವಿನೂತನ ಶಿಕ್ಷೆ; ಬೋರ್ಡ್ ಹಿಡಿದು ನಿಂತ ಡ್ರೈವರ್
35
ನಿನ್ನೆಯೇ ಅಪ್ಪನಿಗೆ ವಿಷಯ ಹೇಳಿದ್ದ
Image Credit : Asianet News

ನಿನ್ನೆಯೇ ಅಪ್ಪನಿಗೆ ವಿಷಯ ಹೇಳಿದ್ದ

ಭಾನುವಾರವಷ್ಟೇ ಶಾಲೆಗೆ ಬಂದು ಮಗನನ್ನು ನೋಡಿಕೊಂಡು ಗುರುಲಿಂಗಯ್ಯ ಹೇಳಿದ್ದರು. ಹಾಸ್ಟೆಲ್ ವಾರ್ಡನ್‌ಗಳಾದ ದೀಪಾ ಮತ್ತು ನಾಗರಾಜ್ ತನಗೆ ಕಿರುಕುಳ ನೀಡುತ್ತಿರುವ ವಿಷಯವನ್ನು ತಂದೆಗೆ ಕೊಟ್ರೇಶ್ ಹೇಳಿಕೊಂಡಿದ್ದನು. ಗುರುಲಿಂಗಯ್ಯ ಅವರು ಈ ವಿಷಯವನ್ನು ಪ್ರಿನ್ಸಿಪಾಲ್ ಸುಶ್ಮಿತಾ ಗಮನಕ್ಕೆ ತಂದಿದ್ದರು.

45
ಗುರುಲಿಂಗಯ್ಯ ದೂರು
Image Credit : Asianet News

ಗುರುಲಿಂಗಯ್ಯ ದೂರು

ದೂರು ನೀಡಿದ ಬಳಿಕವೂ ವಾರ್ಡನ್‌ಗಳ ವಿರುದ್ಧ ಪ್ರಿನ್ಸಿಪಾಲ್ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಇದರಿಂದ ಮಗ ಮಾನಸಿಕವಾಗಿ ನೊಂದು ಪ್ರಾಣ ಕಳೆದುಕೊಂಡಿದ್ದಾನೆ. ಹಾಗಾಗಿ ಮೂವರು ಸಿಬ್ಬಂದಿ ಮತ್ತು ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗುರುಲಿಂಗಯ್ಯ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೇಲೂರು To ಕುಣಿಗಲ್ To ಬಿಹಾರ: ರಿವೀಲ್ ಆಯ್ತು ಆಂಟಿ ಪ್ರಿಯಾಂಕಾ ಖತರ್ನಾಕ್ ಪ್ಲಾನ್‌

55
ಭರಮಸಾಗರ
Image Credit : Asianet News

ಭರಮಸಾಗರ

ಕಟ್ಟಡದಿಂದ ಜಿಗಿದ ಕೊಟ್ರೇಶ್ ಸಾವು ಸ್ಥಳದಲ್ಲಿಯೇ ಸಂಭವಿಸಿದೆಯಾ ಅಥವಾ ಆಸ್ಪತ್ರೆಯಲ್ಲಿ ಆಯ್ತಾ ಎಂಬುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಇತ್ತ ಡಿವಿಎಸ್ ಶಾಲೆ ಆಡಳಿತ ಮಂಡಳಿಯಿಂದ ಯಾವುದೇ ಹೇಳಿಕೆ ಬಂದಿಲ್ಲ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಹಾಸನ ನಿವೇಶನ ಒತ್ತುವರಿ ಪ್ರಕರಣ: ಪುಷ್ಪಾ ಅರುಣ್‌ಕುಮಾರ್‌ಗೆ ಮೊದಲ ಹಂತದ ಗೆಲುವು

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ವಿದ್ಯಾರ್ಥಿ
ಚಿತ್ರದುರ್ಗ
ಕ್ರೈಮ್ ನ್ಯೂಸ್
ಆತ್ಮಹತ್ಯೆ

Latest Videos
Recommended Stories
Recommended image1
ಇಂದು ಮಧ್ಯಾಹ್ನ ಸ್ಫೋಟಿಸುವುದಾಗಿ ರಾಜ್ಯದ ಹಲವು ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ, ಆಘಾತಕಾರಿ ಇ-ಮೇಲ್‌
Recommended image2
ಆನಂದಪುರ : ಮರದ ರಂಬೆ ಮರ್ಮಾಂಗಕ್ಕೆ ತಗುಲಿ ವ್ಯಕ್ತಿ ಸಾವು
Recommended image3
ಬೇಲೂರು To ಕುಣಿಗಲ್ To ಬಿಹಾರ: ರಿವೀಲ್ ಆಯ್ತು ಆಂಟಿ ಪ್ರಿಯಾಂಕಾ ಖತರ್ನಾಕ್ ಪ್ಲಾನ್‌
Related Stories
Recommended image1
ಗಂಡನೂ ಇಲ್ಲ, ಡೇವಿಡ್ಡೂ ಸಿಗಲಿಲ್ಲ: ಪೊಲೀಸ್ ಠಾಣೆಯಿಂದ ಹೋಗಿದ್ದೆಲ್ಲಿಗೆ ಡ್ರಾಮಾ ಕ್ವೀನ್ ಪ್ರಿಯಾಂಕಾ!
Recommended image2
ಚಾಮರಾಜನಗರ: ಕುಡಿದು ವಾಹನ ಚಲಾಯಿಸಿದ್ದ ಆಟೋ ಚಾಲಕನಿಗೆ ವಿನೂತನ ಶಿಕ್ಷೆ; ಬೋರ್ಡ್ ಹಿಡಿದು ನಿಂತ ಡ್ರೈವರ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved