ಮಂಗಳೂರು : ಮಂಗಳೂರಿನಲ್ಲಿ ಮತ್ತೆ ಮುಸ್ಲಿಂ ಸ್ಕಾರ್ಫ್ ವಿವಾದ ತಲೆ ಎತ್ತಿದೆ. ಸ್ಕಾರ್ಫ್ ಧರಿಸಿದ ವಿದ್ಯಾರ್ಥಿನಿಗೆ ಕಾಲೇಜು ದಾಖಲಾತಿಗೆ ನಿರಾಕರಣೆ ಮಾಡಲಾಗಿದೆ. 

ಮಂಗಳೂರಿನ ಸಂತ ಆಗ್ನೇಸ್ ಪಿಯು ಕಾಲೇಜಿನಲ್ಲಿ ಘಟನೆ ನಡೆದಿದೆ. ಕಾಲೇಜು ಆಡಳಿತದ ನಡೆ ವಿರೋಧಿಸಿ ವಿದ್ಯಾರ್ಥಿನಿ ಪೊಲೀಸ್ ಕಮಿಷನರ್, ಡಿಸಿಗೆ ದೂರು ನೀಡಿದ್ದಾರೆ. 

ಉಡುಪಿ ನಿವಾಸಿಯಾದ ಫಾತೀಮಾ ಫಝೀಲಾ  ದ್ವಿತೀಯ ಪಿಯುಗೆ ದಾಖಲಾಗಬೇಕಿತ್ತು. ಆದರೆ  ಸ್ಕಾರ್ಫ್ ಧರಿಸಿದ್ದ ಕಾರಣದಿಂದ ದಾಖಲಾತಿಗೆ ನಿರಾಕರಣೆ ಮಾಡಲಾಗಿದೆ. 

ಆಗ್ನೇಸ್ ಕಾಲೇಜಿನಲ್ಲೇ ಪ್ರಥಮ ಪಿಯು ಮುಗಿಸಿದ್ದು, ಈಗ ಆದರೆ ಸ್ಕಾರ್ಫ್ ಧರಿಸಿದ ಕಾರಣಕ್ಕೆ ದ್ವಿತೀಯ ಪಿಯು ದಾಖಲಾತಿಗೆ ನಿರಾಕರಿಸುತ್ತಿದ್ದಾರೆ. ಈ ಬಗ್ಗೆ  ಪ್ರಥಮ ಪಿಯು ದಾಖಲಾತಿ ವೇಳೆ  ಯಾಔಉದೇ ಮಾಹಿತಿ ನೀಡಿರಲಿಲ್ಲ ಎಂದು ವಿದ್ಯಾರ್ಥಿನಿ ದೂರಿದ್ದಾರೆ. 

ಕಾಲೇಜು ಆಡಳಿತ ಮಂಡಳಿ ಸ್ಕಾರ್ಫ್ ತೊಟ್ಟರೆ ಪ್ರವೇಶ ನೀಡುವುದಿಲ್ಲ ಎಂದಿದ್ದು, ವರ್ಗಾವಣೆ ಪತ್ರ ಕಳಿಸಿಕೊಡುವುದಾಗಿ ಎಚ್ಚರಿಕೆ ನೀಡಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ  ವಿದ್ಯಾರ್ಥಿನಿ ಪರವಾಗಿ ‌ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಹೋರಾಟಕ್ಕೆ ಮುಂದಾಗಿದೆ. 

(ಸಾಂದರ್ಭಿಕ ಚಿತ್ರ)