Asianet Suvarna News Asianet Suvarna News

ಮಂಗಳೂರು ಚಲೋ ಮುಕ್ತಾಯ; ನಿರ್ಬಂಧಕಾಜ್ಞೆ ಮಧ್ಯೆಯೇ ಮಂಗಳೂರಿನಲ್ಲಿಂದು ಕೇಸರಿ ಪಡೆ ಘರ್ಜನೆ

ಬಿಜೆಪಿ ಹಮ್ಮಿಕೊಂಡಿದ್ದ ಮಂಗಳೂರು ಚಲೋ ಮುಕ್ತಾಯಗೊಂಡಿದೆ. ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದಿದ್ದರೂ ಸರ್ಕಾರದ ವಿರುದ್ದ ತನ್ನ ಆಕ್ರೋಶವನ್ನು ಘೋಷಣೆ ಮಾಡಿದ ರೀತಿಯಲ್ಲಿ ವ್ಯಕ್ತಪಡಿಸುವಲ್ಲಿ ಸಫಲವಾಗಿದೆ. ಈ ಮಧ್ಯೆ ಚಲೋದಲ್ಲಿ ವಶಕ್ಕೆ ಪಡೆಯಲಾಗಿದ್ದ  ಕಾರ್ಯಕರ್ತರನ್ನು ಬಿಟ್ಟು ಕಳಿಸುವುದು ತಡವಾಯಿತೆಂದು ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್ ಪೊಲೀಸ್ ಅಧಿಕಾರಿ ವಿರುದ್ದ ಉಗ್ರ ರೂಪ ತಾಳಿದ್ದಾರೆ.

Mangaluru chalo ends BJP Succesfull in Protest

ಬೆಂಗಳೂರು (ಸೆ.07): ಬಿಜೆಪಿ ಹಮ್ಮಿಕೊಂಡಿದ್ದ ಮಂಗಳೂರು ಚಲೋ ಮುಕ್ತಾಯಗೊಂಡಿದೆ. ನಿರೀಕ್ಷಿತ ಮಟ್ಟದಲ್ಲಿ  ಯಶಸ್ವಿಯಾಗದಿದ್ದರೂ ಸರ್ಕಾರದ ವಿರುದ್ದ ತನ್ನ ಆಕ್ರೋಶವನ್ನು ಘೋಷಣೆ ಮಾಡಿದ ರೀತಿಯಲ್ಲಿ ವ್ಯಕ್ತ ಪಡಿಸುವಲ್ಲಿ ಸಫಲವಾಗಿದೆ. ಈ ಮಧ್ಯೆ ಚಲೋದಲ್ಲಿ ವಶಕ್ಕೆ ಪಡೆಯಲಾಗಿದ್ದ  ಕಾರ್ಯಕರ್ತರನ್ನು ಬಿಟ್ಟು ಕಳಿಸುವುದು ತಡವಾಯಿತೆಂದು ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್ ಪೊಲೀಸ್ ಅಧಿಕಾರಿ ವಿರುದ್ದ ಉಗ್ರ ರೂಪ ತಾಳಿದ್ದಾರೆ.

ಮಂಗಳೂರಿನಲ್ಲಿ ಇಂದು ಕೇಸರಿ ಪಡೆ ಘರ್ಜನೆ

ಹಿಂದೂ ಯುವಕರ ಹತ್ಯೆ ತಡೆ ಮತ್ತು ಸಚಿವ ರಮಾನಾಥ ರೈ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿದ್ದ ಮಂಗಳೂರು ಚಲೋ ಇಂದು ಮುಕ್ತಾಯವಾಗಿದೆ. ಬೈಕ್ ರ್ಯಾಲಿ ಮೂಲಕ ಮಂಗಳೂರು ತಲುಪಿ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳುವ ಬಿಜೆಪಿ ಉದ್ದೇಶ ಸಫಲವಾಗದಿದ್ದರೂ, ನಿರ್ಬಂಧಕಾಜ್ಞೆ ಉಲ್ಲಂಘಿಸಿ ಪ್ರತಿಭಟನಾ ಸಭೆ ನಡೆಸುವಲ್ಲಿ ಸಫಲವಾಗಿದೆ. ನೆಹರೂ ಮೈದಾನದಲ್ಲಿ ಶಾಂತಿಯುತ ಸಮಾವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದರೂ ಜ್ಯೋತಿ ವೃತ್ತದಲ್ಲಿ ತಾತ್ಕಾಲಿಕ ವೇದಿಕೆ ನಿರ್ಮಿಸಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್ ಸಭೆ ನಡೆಯಿತು.

ಪ್ರತಿಭಟನಾ ಸಭೆಯ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಯತ್ನ ನಡೆಯಿತು. ಪೊಲೀಸರ ಬಿಗಿ ಬಂದೋಬಸ್ತ್ ಇದ್ದರೂ  ಜ್ಯೋತಿ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಯುವ ಮೋರ್ಛಾ ಕಾರ್ಯಕರ್ತರು ರ್ಯಾಲಿ  ಮೂಲಕವೇ ಬಂದು ಗಮನ ಸೆಳೆದರು. ಈ ಸಂದರ್ಭದಲ್ಲಿ ಡಿಸಿ ಕಚೇರಿ ಆವರಣದಲ್ಲಿ ಬಿಗುವಿನ ವಾತಾವರಣ ಉಂಟಾಯ್ತು. ಕಾರ್ಯ ಕರ್ತರು ಮತ್ತು ಪೊಲೀಸರು ನಡುವೆ ಮಾತಿನ ಚಕಮಕಿ ನಡೆಯಿತು. ನೂಕಾಟ ತಳ್ಳಾಟ ಆರಂಭವಾಗಿ ಉದ್ವಿಗ್ನ ಸ್ಥಿತಿ ಕೂಡಡ ಸೃಷ್ಟಿಯಾಗಿತ್ತು. ಈ ವೇಳೆ ಓರ್ವ ಕಾರ್ಯಕರ್ತ ನೆಲಕ್ಕುರುಳಿ ಬಿದ್ದು ಗಾಯಗೊಂಡ ಪರಿಣಾಮ ಕಾರ್ಯಕರ್ತರ ಆಕ್ರೋಶ ಜೋರಾಗಿ ಕೆಲವರು ಕೈಗೆ ಸಿಕ್ಕ ನಾಲ್ಕಾರು ಪುಟ್ಟ ಕಲ್ಲುಗಳನ್ನು ಪೊಲೀಸರತ್ತ ಎಸೆಯಲು ಮುಂದಾದ್ರು. ಹರಸಾಹಸಪಟ್ಟು ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಸಂಸದರಾದ ನಳಿನ್ ಕುಮಾರ್, ಪ್ರತಾಪ ಸಿಂಹ, ಶಾಸಕರಾದ ಸುನಿಲ್ ಕುಮಾರ್ ಹಾಗೂ ಸಿ. ಟಿ. ರವಿ ಮುಂತಾದವರು ಡಿಸಿ ಕಚೇರಿಗೆ ನುಗ್ಗಲು ಯತ್ನಿಸಿದಾಗ ಅವರನ್ನು ಸ್ಥಳದಲ್ಲೇ ಬಂಧಿಸಲಾಯ್ತು. ಈ ಮಧ್ಯೆ ಪ್ರತಿಭಟನಾ ಸಭೆಯ ಬಳಿಕ ವಶಕ್ಕೆ ಪಡೆಯಲಾಗಿದ್ದ ಕಾರ್ಯಕರ್ತರನ್ನು  ಬಿಡುಗಡೆ ಮಾಡುವುದು ವಿಳಂಬವಾದ ಪರಿಣಾಮ ಕದ್ರಿ ಪೊಲೀಸ್ ಠಾಣಾ ಇನ್ ಸ್ಪೆಕ್ಟರ್ ವಿರುದ್ದ ಸಂಸದ ನಳೀನ್ ಕುಮಾರ್ ಕಟೀಲ್ ಉಗ್ರ ರೂಪ ತೋರಿಸಿದ್ದಾರೆ.  ತಾನೊಬ್ಬ ಸಂಸದ ಎಂಬದನ್ನೂ ಮರೆತು ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ದ ಸಂಸದ ಆಕ್ಷೇಪಾರ್ಹ ರೀತಿಯಲ್ಲಿ ನಳೀನ್ ಕುಮಾರ್ ಕಟೀಲ್ ನಡೆದುಕೊಂಡಿದ್ದಾರೆ.

ಒಟ್ಟಾರೆ,  ರಾಜಕೀಯ ಸಂದೇಶ ನೀಡುವಲ್ಲಿ ಸಫಲಗೊಂಡ ಮಂಗಳೂರು ಚಲೋದಲ್ಲಿ  ಕಾರ್ಯಕರ್ತರ ಕ್ರೋಢೀಕರಣದಲ್ಲಿ ಮುಖಂಡರು  ಎಡವಿದ್ದಾರೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರ ಬಂಧನ ಹಿನ್ನೆಲೆಯಲ್ಲಿ ಮಂಗಳೂರು ಚಲೋದಲ್ಲಿ ಭಾಗವಹಿಸಬೇಕಾಗಿದ್ದ ಕಾರ್ಯಕರ್ತರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡಿತ್ತು.  ಬಿಜೆಪಿಯ ಮೊದಲ ಸಾಲಿನ ನಾಯಕರೆಲ್ಲಾ ಮಂಗಳೂರು ಚಲೋದಲ್ಲಿ ಭಾಗಿಯಾಗಿ ಪರಿವಾರ ಸಂಘಟನೆಗಳು ಮತ್ತು ಬಿಜೆಪಿ ಮಧ್ಯೆ ಹೊಂದಾಣಿಕೆಗೆ ವೇದಿಕೆಯಾಗಿದೆ. ಕಾರ್ಯಕರ್ತರ ಸಂಖ್ಯಾಬಲ ಇಳಿಕೆಯಾದ ಹಿನ್ನೆಲೆಯಲ್ಲಿ ಕೆಲವು ಸಡಿಲ ನೀತಿಗಳನ್ನು ಪೊಲೀಸರು  ಅನುಸರಿಸಿದ ಪರಿಣಾಮ ನಿರ್ಬಂಧಕಾಜ್ಞೆಯನ್ನು ಉಲ್ಲಂಘಿಸಿ ಜ್ಯೋತಿ ಸರ್ಕಲ್ ನಿಂದ ನೆಹರೂ ಮೈದಾನದವರೆಗೆ ಬರುವಲ್ಲಿ ಬಿಜೆಪಿ ಯಶಸ್ಚಿಯಾಯಿತು.

 

Follow Us:
Download App:
  • android
  • ios