ಗಾಂಜಾ ವ್ಯಸನ ತ್ಯಜಿಸುವಂತೆ ಹಿತವಚನ ಹೇಳಿದ್ದಕ್ಕೆ ಆ ಪ್ರದೇಶದ ಯುವಕರು ಈ ಕೃತ್ಯ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. ಗಾಯಗೊಂಡ 58ರ ಹರೆಯದ ತಾರಾನಾಥ್ ಯಾದವ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಉಳ್ಳಾಲ ಠಾಣಾ ವ್ಯಾಪ್ತಿ ಬಸ್ತಿಪಡ್ಪು ಎಂಬಲ್ಲಿ ಈ ಘಟನೆ ನಡೆದಿದೆ. ಮನೆಯ ವೆಂಟಿಲೇಟರ್ ಮೂಲಕ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿ ಬೆಡ್​ರೂಮ್​ನೊಳಗೆ ವ್ಯಾಪಿಸುತ್ತಿದ್ದಂತೆಯೇ ಪತ್ನಿ ವಿದ್ಯಾ ಸಮಯಪ್ರಜ್ಞೆ ಮೆರೆದು ಪತಿಯ ಜೊತೆ ಪುತ್ರ 10 ವರ್ಷದ ಮಿಥುನ್​ ಅವರನ್ನು ರಕ್ಷಿಸಿದ್ದಾರೆ.

ಮಂಗಳೂರು(ಅ.29): ಕಿಟಕಿ ಮೂಲಕ ಪೆಟ್ರೋಲ್ ಎಸೆದು ಬೆಂಕಿ ಇಟ್ಟು ಮನೆಯವರನ್ನ ಕೊಲ್ಲಲು ಯತ್ನಿಸಿರುವ ಘಟನೆ ಮಂಗಳೂರಿನ ಹೊರವಲಯದ ಉಳ್ಳಾಲದಲ್ಲಿ ನಡೆದಿದೆ. ಘಟನೆಯಲ್ಲಿ ಮನೆಯ ಯಜಮಾನನಿಗೆ ಸುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪತ್ನಿ ಮತ್ತು ಮಗ ಸುರಕ್ಷಿತವಾಗಿದ್ದಾರೆ.

ಗಾಂಜಾ ವ್ಯಸನ ತ್ಯಜಿಸುವಂತೆ ಹಿತವಚನ ಹೇಳಿದ್ದಕ್ಕೆ ಆ ಪ್ರದೇಶದ ಯುವಕರು ಈ ಕೃತ್ಯ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. ಗಾಯಗೊಂಡ 58ರ ಹರೆಯದ ತಾರಾನಾಥ್ ಯಾದವ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಉಳ್ಳಾಲ ಠಾಣಾ ವ್ಯಾಪ್ತಿ ಬಸ್ತಿಪಡ್ಪು ಎಂಬಲ್ಲಿ ಈ ಘಟನೆ ನಡೆದಿದೆ. ಮನೆಯ ವೆಂಟಿಲೇಟರ್ ಮೂಲಕ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿ ಬೆಡ್​ರೂಮ್​ನೊಳಗೆ ವ್ಯಾಪಿಸುತ್ತಿದ್ದಂತೆಯೇ ಪತ್ನಿ ವಿದ್ಯಾ ಸಮಯಪ್ರಜ್ಞೆ ಮೆರೆದು ಪತಿಯ ಜೊತೆ ಪುತ್ರ 10 ವರ್ಷದ ಮಿಥುನ್​ ಅವರನ್ನು ರಕ್ಷಿಸಿದ್ದಾರೆ.

ಘಟನೆಯಲ್ಲಿ ತಾರಾನಾಥ ಅವರ ಎರಡು ಕೈಗಳಿಗೆ ಸುಟ್ಟ ಗಾಯಗಳಾಗಿದೆ. ಪರಿಸರದಲ್ಲಿ ಹರಡುತ್ತಿರುವ ಗಾಂಜಾ ಹಾವಳಿ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಪ್ರತೀಕಾರವಾಗಿ ಈ ಕೃತ್ಯ ನಡೆಸಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.