ಬೆಂಗಳೂರು[ನ.25]: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಕಗನ ಮರಡಿಯಲ್ಲಿ ವಿಶ್ವೇಶ್ವರಯ್ಯ ನಾಲೆಗೆ ಬಸ್‌ ಉರುಳಿ 30 ಮಂದಿ ಮೃತಪಟ್ಟಿದ್ದಕ್ಕೆ ಶನಿವಾರ ಸಂಜೆ ಅಂಬರೀಷ್‌ ಸಂತಾಪ ಹೇಳಿದ್ದರು.

ಇದನ್ನೂ ಓದಿ: ಅನಾರೋಗ್ಯದೊಂದಿಗೆ 2 ದಶಕಗಳ ಹೋರಾಟ ನಡೆಸಿದ್ದ ’ರೆಬೆಲ್ ಸ್ಟಾರ್’!

ಈ ಸುದ್ದಿ ತಿಳಿದು ಭಾವುಕರಾಗಿದ್ದ ಅಂಬರೀಶ್‌ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದರು. ಇದಾದ ಕೆಲವೇ ಹೊತ್ತಿನ ಬಳಿಕ ಅಸ್ವಸ್ಥಗೊಂಡ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿದು ಬಂದಿದೆ.