Asianet Suvarna News Asianet Suvarna News

ಕಾಲೇಜಿನಲ್ಲಿ ‘ನಿಖಿಲ್ ಎಲ್ಲಿದ್ದೀಯಪ್ಪ’! ಸುಮಲತಾ ರಿಯಾಕ್ಷನ್ ನೋಡ್ಲೆಬೇಕಪ್ಪಾ!

ಲೋಕಸಭೆ ಚುನಾವಣೆ ವೇಳೆ ಭಾರೀ ವೈರಲ್ ಆಗಿದ್ದ ‘ನಿಖಿಲ್ ಎಲ್ಲಿದ್ದೀಯಪ್ಪ’ ಘೋಷಣೆಯು, ಈಗಲೂ ಮುಂದುವರಿದಿದೆ. ಮಂಡ್ಯ ಸಂಸದೆ ಸುಮಲತಾರನ್ನು ಹುಬ್ಬಳ್ಳಿಯ ಕಾಲೇಜೊಂದರ ವಿದ್ಯಾರ್ಥಿಗಳು ಈ ಘೋಷಣೆ ಕೂಗಿ ಸ್ವಾಗತಿಸಿದ್ದಾರೆ.

ಹುಬ್ಬಳ್ಳಿ (ಜೂ.15): ಲೋಕಸಭೆ ಚುನಾವಣೆ ವೇಳೆ ಭಾರೀ ವೈರಲ್ ಆಗಿದ್ದ ‘ನಿಖಿಲ್ ಎಲ್ಲಿದ್ದೀಯಪ್ಪ’ ಘೋಷಣೆಯು ಈಗಲೂ ಮುಂದುವರಿದಿದೆ. ಮಂಡ್ಯ ಸಂಸದೆ ಸುಮಲತಾರನ್ನು ಹುಬ್ಬಳ್ಳಿಯ ಕಾಲೇಜೊಂದರ ವಿದ್ಯಾರ್ಥಿಗಳು ಈ ಘೋಷಣೆ ಕೂಗಿ ಸ್ವಾಗತಿಸಿದ್ದಾರೆ.

ಇಲ್ಲಿನ  ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಸುಮಲತಾ ಆಗಮಿಸುತ್ತಿದ್ದಂತೆ, ನೆರೆದ ವಿದ್ಯಾರ್ಥಿಗಳು ‘ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಕೂಗಲಾರಂಭಿಸಿದ್ದಾರೆ. ಅದಕ್ಕೆ ಸುಮಲತಾ ರಿಯಾಕ್ಷನ್ ಹೇಗಿತ್ತು, ಅಭಿಷೇಕ್ ಅಂಬರೀಷ್ ಏನು ಪ್ರತಿಕ್ರಿಯೆ ನೀಡಿದ್ರು? ಈ ವಿಡಿಯೋ ನೋಡಿ.

ನಿಖಿಲ್ ಕುಮಾರಸ್ವಾಮಿ ಅಭಿನಯದ ಜಾಗ್ವಾರ್ ಆಡಿಯೋ ಲಾಂಚ್ ವೇಳೆ ಅಪ್ಪ ಎಚ್.ಡಿ. ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ನಡುವಿನ ಸಂಭಾಷಣೆ  ‘ನಿಖಿಲ್ ಎಲ್ಲಿದ್ದೀಯಪ್ಪ’ ಎಂಬ ರೂಪ ತಾಳಿ ಚುನಾವಣೆ ವೇಳೆ ಭಾರೀ ಟ್ರೋಲ್/ ವೈರಲ್ ಆಗಿತ್ತು.  

Video Top Stories