ಮಂಡ್ಯ : ಶ್ರೀ ಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 8 ಮಂದಿ ಕನ್ನಡಿಗರು ಮೃತರಾಗಿದ್ದು, ನಾಗಮಂಗಲದ ವ್ಯಕ್ತಿಯೋರ್ವರು ಮೃತರಾಗಿದ್ದಾರೆ. 

ನಾಗಮಂಗಲ ತಾಲೂಕಿನ ಬೆಟ್ಟದಕೋಟೆ ಗ್ರಾಮದ ರಮೇಶ್ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದಾರೆ. 

ಬೆಟ್ಟದಕೋಟೆ ಗ್ರಾಮದ ಕೆ.ಇ.ಬಿ. ನಿವೃತ್ತ ನೌಕರ ಲಕ್ಷ್ಮಣಗೌಡರ ಮಗ ರಮೇಶ್ ಕೆಲ ವರ್ಷಗಳಿಂದ ತುಮಕೂರಿನಲ್ಲಿ ನೆಲೆಸಿದ್ದರು. 

ನಾಗಮಂಗಲ ತಾಲೂಕಿನ ಬೆಟ್ಟದ ಕೋಟೆ ಗ್ರಾಮಕ್ಕೆ ರಮೇಶ್ ಮೃತದೇಹ ತಂದು ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಸಿದ್ದತೆ ನಡೆಸಿದ್ದಾರೆ. 

ಬುಧವಾರ ರಾತ್ರಿ ಅಥವಾ ಗುರುವಾರ ಮೃತದೇಹವನ್ನು ಸ್ವ ಗ್ರಾಮಕ್ಕೆ ತರು ಸಾಧ್ಯತೆ ಇದೆ.