Asianet Suvarna News Asianet Suvarna News

ರಾಜ್ಯದಲ್ಲಿ ದೋಸ್ತಿ, ಮಂಡ್ಯದಲ್ಲಿ ಕುಸ್ತಿ... ಅಂಬಿ ಇಲ್ಲವಾದ ಮೇಲೆ ಎಲ್ಲ ಅಯೋಮಯ!

ಒಂದು ಕಡೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಚಿವ ಸಂಪುಟ ವಿಸ್ತರಣೆ ತಲೆನೋವು ತಂದಿದ್ದರೆ ಇನ್ನೊಂದು ಕಡೆ ಮಂಡ್ಯದಲ್ಲಿ ನಡೆಯುತ್ತಿರುವ ಆಂತರಿಕ ರಾಜಕಾರಣದ ಬೆಳವಣಿಗೆಗಳನ್ನು ಹೇಗೆ ನಿಯಂತ್ರಣ ಮಾಡಬೇಕು ಎನ್ನುವುದು ಗೊತ್ತಾಗುತ್ತಿಲ್ಲ.  ಮಂಡ್ಯದ ನಾಯಕ ಅಂಬರೀಶ್ ಸಹ ನಿಧನರಾಗಿದ್ದು ರಾಜಕಾರಣದ ನಿರ್ವಾತ ಸ್ಥಿತಿ ತಂದಿದೆ. ಅಂಬರೀಶ್ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಬ್ಬರಿಗೂ ಆಪ್ತರಾಗಿದ್ದರು.

Mandya Congress Leaders Feel Isolated, Complains To High command
Author
Bengaluru, First Published Dec 5, 2018, 6:27 PM IST

ಬೆಂಗಳೂರು[ಡಿ.05]  ಸಮನ್ವಯ ಸಮಿತಿ ಸಭೆಗೂ ಮುನ್ನ ಮಂಡ್ಯದ ಕಾಂಗ್ರೆಸ್ ನಾಯಕರು ತಮ್ಮ ದೂರು ಸಲ್ಲಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ನಾಯಕರ ಸಭೆ ನಡೆದಿದ್ದು  ಸಮನ್ವಯ ಸಮಿತಿ ಎದುರು ಮುಂದಿಡುವ ವಿಷಯಗಳ ಚರ್ಚೆ ನಡೆದಿದೆ.

ಆದರೆ ಇದು ಎಲ್ಲದಕ್ಕಿಂತ ಮುಖ್ಯವಾಗಿ  ಕೆಪಿಸಿಸಿ ಕಚೇರಿಗೆ ಮಂಡ್ಯದ ಕಾಂಗ್ರೆಸ್ ಮುಖಂಡರ ಭೇಟಿ ನೀಡಿದ್ದರು. ಮಾಜಿ ಸಚಿವ ಚೆಲುವರಾಯಸ್ವಾಮಿ,  ಮಾಜಿ ಶಾಸಕ ನರೇಂದ್ರ ಸ್ವಾಮಿ ಸೇರಿ ಜಿಲ್ಲಾ ಮುಖಂಡರು ಭೇಟಿ ನೀಡಿ ನಾಯಕರ ಬಳಿ ತಮ್ಮ ಅಹವಾಲು ಹೇಳಿಕೊಂಡಿದ್ದಾರೆ.

ರಾತ್ರೋ ರಾತ್ರಿ ಮಂಡ್ಯ ಮನೆ ಖಾಲಿ ಮಾಡಿದ ಪದ್ಮಾವತಿ

ಮಂಡ್ಯದ ಕಾಂಗ್ರೆಸ್ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸಮನ್ವಯ ಸಮಿತಿ ಸಭೆ ಮುಂದೆ ವಿಚಾರಗಳನ್ನು ಮಂಡಿಸಲು ಕೇಳಿಕೊಂಡಿದ್ದಾರೆ. ಜಿಲ್ಲಾ ಮಟ್ಟದಲ್ಲಿ ನಮ್ಮ ಕೆಲಸಗಳು ಆಗುತ್ತಿಲ್ಲ. ನಮ್ಮ ಕಾರ್ಯಕರ್ತರ ಕೆಲಸಗಳೂ ಆಗುತ್ತಿಲ್ಲ. ಜೆಡಿಎಸ್ ನಾಯಕರು, ಕಾರ್ಯಕರ್ತರದ್ದೇ ದರ್ಬಾರು. ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ತೆಗೆಯುತ್ತಿಲ್. ಕಾರಣವಿಲ್ಲದೆ ಜೆಡಿಎಸ್ ಕಾರ್ಯಕರ್ತರು ಕಿರಿಕಿರಿ ಮಾಡುತ್ತಿದ್ದಾರೆ. ಬೂತ್ ಮಟ್ಟದಲ್ಲೂ ನಮ್ಮವರಿಗೆ ಕಿರಿಕಿರಿ ಮಾಡುತ್ತಿದ್ದಾರೆ

ಚಿಕ್ಕಪುಟ್ಟ ಗುತ್ತಿಗೆ ಕೂಡ ಅವರಿಗೆ ಸಿಗುತ್ತಿಲ್ಲ. ಜೆಡಿಎಸ್ ಸಚಿವರು,ಶಾಸಕರು ಕೂಡ ಹಗೆ ಸಾಧಿಸ್ತಿದ್ದಾರೆ. ನಿಮ್ಮ ಗಮನಕ್ಕೆ ತಂದರೂ ಯಾವುದೇ ಸುಧಾರಣೆಯಾಗಿಲ್ಲ. ಪರಿಸ್ಥಿತಿ ಈಗೇ ಆದ್ರೆ ಎಲ್ಲವೂ ಕೈಮೀರಿ ಹೋಗುತ್ತದೆ. ಹೀಗಾಗಿ ಸಮನ್ವಯ ಸಮಿತಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ ಎಂದು ಮಂಡ್ಯ ಕಾಂಗ್ರೆಸ್  ನಾಯಕರು ಮನವಿ ಮಾಡಿಕೊಂಡಿದ್ದಾರೆ.

 

Follow Us:
Download App:
  • android
  • ios