ಮಂಡ್ಯ (ಡಿ. 09): ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳಿಗೂ ಅಂತ್ಯ ಸಂಸ್ಕಾರ ಮಾಡುವುದನ್ನು ಕೇಳಿದ್ದೇವೆ. ಮಂಗನಿಗೆ ಅಂತ್ಯ ಸಂಸ್ಕಾರ ನೇರವೇರಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.  

ಕರೆಂಟ್ ಶಾಕ್ ನಿಂದ ಮೃತಪಟ್ಟ ಮಂಗಕ್ಕೆ ಶ್ರೀರಂಗಪಟ್ಟಣದ ಗಂಜಾಮ್ ಆಟೋ ಚಾಲಕರು ವಿಧಿ ವಿಧಾನದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಮೃತ ಮಂಗನ ಕಳೇಬರವನ್ನು ಆಟೋ ನಿಲ್ದಾಣದ ಬಳಿ ಮಣ್ಣು ಮಾಡಿದ್ದಾರೆ. 

ಮೃತ ಮಂಗನ ಅಂತ್ಯ ಸಂಸ್ಕಾರದ ಬಳಿಕವೂ ಸಮಾಧಿ ಬಳಿ ಕುಳಿತ ಮಂಗನ ಸಂಗಾತಿ ಕಣ್ಣೀರಿಡುತ್ತಿದೆ. ಹೃದಯ ವಿದ್ರಾವಕ ಘಟನೆಗೆ ಸಾಕ್ಷಿಯಾಗಿದೆ ಗಂಜಾಮ್ ಆಟೋ ನಿಲ್ದಾಣ.  11 ನೇ ದಿನಕ್ಕೆ ಮೃತ ಮಂಗನ ತಿಥಿ ಆಚರಿಸಲು ಆಟೋ ಚಾಲಕರು ನಿರ್ಧರಿಸಿದ್ದಾರೆ.