ಇಂಗ್ಲೆಂಡ್'ನ ಮ್ಯಾಂಚೆಸ್ಟರ್'ನಲ್ಲಿ ನಡೆದ ಬಾಂಬ್ ದಾಳಿ ಬಳಿಕ ಎಲ್ಲಾ ಕಡೆಯಲ್ಲೂ ಭಯಬಿದ್ದ ಜನರ ಕಿರುಚಾಟ ಕೇಳಿ ಬರುತ್ತಿತ್ತು. ರಸ್ತೆಯಲ್ಲಿದ್ದ ಆ್ಯಂಬುಲೆನ್ಸ್ ಹಾಗೂ ಪೊಲೀಸ್ ವಾಹನಗಳ ಸೈರನ್ ಸದ್ದಿನ ನಡುವೆ ಯಾರಿಗೂ ತಾವೇನು ಮಾಡಬೇಕು? ಎಲ್ಲಿ ಹೋಗಬೇಕು? ಯಾರಿಂದ ಸಹಾಯ ಪಡೆಯಬೇಕು ಎಂದು ತಿಳಿದಿರಲಿಲ್ಲ. ಎಲ್ಲಿ ನೋಡಿದರೂ ಬೆಚ್ಚಿ ಬೀಳಿಸುವ ವಾತಾವರಣವೇ ಇತ್ತು. ಈ ಸಂದರ್ಭದಲ್ಲಿ ಭಾರತೀಯ ಮೂಲದ ಸಿಖ್ ಕ್ಯಾಬ್ ಡ್ರೈವರ್ ಒಬ್ಬರು ಮಾನವೀಯತೆ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.
ಮ್ಯಾಂಚೆಸ್ಟರ್ (ಮೇ 23): ಇಂಗ್ಲೆಂಡ್'ನ ಮ್ಯಾಂಚೆಸ್ಟರ್'ನಲ್ಲಿ ನಡೆದ ಬಾಂಬ್ ದಾಳಿ ಬಳಿಕ ಎಲ್ಲಾ ಕಡೆಯಲ್ಲೂ ಭಯಬಿದ್ದ ಜನರ ಕಿರುಚಾಟ ಕೇಳಿ ಬರುತ್ತಿತ್ತು. ರಸ್ತೆಯಲ್ಲಿದ್ದ ಆ್ಯಂಬುಲೆನ್ಸ್ ಹಾಗೂ ಪೊಲೀಸ್ ವಾಹನಗಳ ಸೈರನ್ ಸದ್ದಿನ ನಡುವೆ ಯಾರಿಗೂ ತಾವೇನು ಮಾಡಬೇಕು? ಎಲ್ಲಿ ಹೋಗಬೇಕು? ಯಾರಿಂದ ಸಹಾಯ ಪಡೆಯಬೇಕು ಎಂದು ತಿಳಿದಿರಲಿಲ್ಲ. ಎಲ್ಲಿ ನೋಡಿದರೂ ಬೆಚ್ಚಿ ಬೀಳಿಸುವ ವಾತಾವರಣವೇ ಇತ್ತು. ಈ ಸಂದರ್ಭದಲ್ಲಿ ಭಾರತೀಯ ಮೂಲದ ಸಿಖ್ ಕ್ಯಾಬ್ ಡ್ರೈವರ್ ಒಬ್ಬರು ಮಾನವೀಯತೆ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.
ಈ ಸಿಖ್ ವ್ಯಕ್ತಿ ತನ್ನ ಕ್ಯಾಬ್'ನಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಕೆಲಸದಲ್ಲಿ ತಲ್ಲೀನನಾದ. ಅಲ್ಲದೇ ತನ್ನ ಕ್ಯಾಬ್ ಮೇಲೆ 'ಅಗತ್ಯವಿರುವವರಿಗೆ ಉಚಿತ ಕ್ಯಾಬ್ ವ್ಯವಸ್ಥೆ' ಎಂದು ಪೇಪರ್ ಒಂದರಲ್ಲಿ ಬರೆದು ಅಂಟಿಸಿದ್ದಾನೆ ಹಾಗೂ ತನ್ನ ಕೆಲಸ ಮುಂದುವರೆಸಿದ್ದಾನೆ. ಆದರೆ ಇವರ ಈ ಮಾನವೀಯತೆಭರಿತ ಕೆಲಸ ಮಾಧ್ಯಮದ ಕಣ್ಣಿಗೆ ಸೆರೆ ಸಿಕ್ಕಿದೆ. ಹಿರಿಯ ಪತ್ರಕರ್ತ ಪಂಕಜ್ ಪಚೌರಿ ಈ ವ್ಯಕ್ತಿಯ ಫೋಟೋವನ್ನು ಟ್ವಿಟರ್'ನಲ್ಲಿ ಶೇರ್ ಮಾಡಿದ್ದಾರೆ. ಸದ್ಯಕ್ಕಿನ್ನೂ ಈ ವ್ಯಕ್ತಿಯ ಹೆಸರು ಮಾತ್ರ ತಿಳಿದು ಬಂದಿಲ್ಲ. ಇನ್ನು ಮಾನವೀಯತೆಯ ವಿಚಾರ ಬಂದಾಗ ಹೆಸರು, ಧರ್ಮ, ಜಾತಿ ಹಾಗೂ ದೇಶ ಇವೆಲ್ಲವೂ ಗಣನೆಗೆ ಬರುವುದಿಲ್ಲ ಎಂಬ ಮಾತೊಂದಿದೆ. ಈ ಮಾತು ಇಂದು ನಿಜವಾಗಿದೆ.
