ಜೆಟ್ ಏರ್'ವೇಸ್'ನ ಮಹಿಳಾ ಉದ್ಯೋಗಿ ಮೇಲಿನ ಆಸೆಯಿಂದಾಗಿ ವಿಮಾನದಲ್ಲಿ ಅಪಹರಣಕಾರರಿದ್ದಾರೆ ಎಂಬ ಬೆದರಿಕೆ ಚೀಟಿ ಅಂಟಿಸಿ, ಭಾರೀ ಆತಂಕ ಸೃಷ್ಟಿಸಿದ ವ್ಯಕ್ತಿ ಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ.
ನವದೆಹಲಿ(ಅ.31): ಜೆಟ್ ಏರ್'ವೇಸ್'ನ ಮಹಿಳಾ ಉದ್ಯೋಗಿ ಮೇಲಿನ ಆಸೆಯಿಂದಾಗಿ ವಿಮಾನದಲ್ಲಿ ಅಪಹರಣಕಾರರಿದ್ದಾರೆ ಎಂಬ ಬೆದರಿಕೆ ಚೀಟಿ ಅಂಟಿಸಿ, ಭಾರೀ ಆತಂಕ ಸೃಷ್ಟಿಸಿದ ವ್ಯಕ್ತಿ ಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ.
ಬೆಳಗ್ಗೆ 2.55ಕ್ಕೆ ಮುಂಬೈನಿಂದ ಹೊರಟು ದೆಹಲಿಗೆ ತೆರಳುತ್ತಿದ್ದ, ಸಿಬ್ಬಂದಿ ಸೇರಿ ೧೨೨ ಪ್ರಯಾಣಿಕರಿದ್ದ ವಿಮಾನದ ಶೌಚಾಲಯದಲ್ಲಿ ಸೋಮವಾರ ಬೆಳಗ್ಗೆ ಚೀಟಿ ಪತ್ತೆಯಾಗಿತ್ತು. ‘ವಿಮಾನದಲ್ಲಿ ೧೨ ಅಪಹರಣಕಾರರು ಇದ್ದಾರೆ. ವಿಮಾನವನ್ನು ಲ್ಯಾಂಡ್ ಮಾಡದೇ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಒಯ್ಯಿರಿ. ದೆಹಲಿಯಲ್ಲಿ ವಿಮಾನ ಇಳಿಸಿದರೆ ಸ್ಫೋಟಗೊಳ್ಳಲಿದೆ’ ಎಂದು ಉರ್ದು ಹಾಗೂ ಇಂಗ್ಲಿಷ್ನಲ್ಲಿ ಬರೆಯಲಾಗಿತ್ತು. ಕೂಡಲೇ ವಿಮಾನವನ್ನು ಅಹಮದಾಬಾದ್ ನಿಲ್ದಾಣಕ್ಕೆ ಕಳುಹಿಸಿ, ತುರ್ತು ಭೂಸ್ಪರ್ಶ ಮಾಡಲಾಯಿತು. ನಿರ್ಜನ ಪ್ರದೇಶಕ್ಕೆ ಒಯ್ದು ಪರಿಶೀಲನೆ ನಡೆಸಲಾಯಿತು. ಬೆದರಿಕೆ ಇಲ್ಲ ಎಂದು ದೃಢಪಟ್ಟ ಬಳಿಕ ಬೆಳಗ್ಗೆ ೧೦.೪೦ಕ್ಕೆ ದೆಹಲಿಯತ್ತ ಕಳುಹಿಸಲಾಯಿತು.
ತನಿಖೆ ನಡೆಸಿದಾಗ ಚೀಟಿ ಅಂಟಿಸಿದ್ದುಉದ್ಯಮಿ ಬಿರ್ಜು ಕಿಶೋರ್ ಸಲ್ಲಾ ಎಂದು ಪತ್ತೆಯಾಗಿದೆ. ಜೆಟ್ ಏರ್ವೇಸ್ ಉದ್ಯೋಗಿಯಾಗಿದ್ದ ಮಹಿಳೆ ಯೊಬ್ಬಳನ್ನು ತನ್ನಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಈತ ಬಯಸಿದ್ದ. ಜೆಟ್ ಏರ್ವೇಸ್ ಮುಚ್ಚಿ ಹೋದರೆ ಆಕೆ ತನ್ನ ಬಳಿಗೆ ಬರುತ್ತಾಳೆ ಎಂದು ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗಿದೆ. ಕೆಲ ದಿನದ ಹಿಂದೆ ಊಟದಲ್ಲಿ ಜಿರಳೆ ಇದೆ ಎಂದು ಈತ ಜಗಳ ತೆಗೆದಿದ್ದ. ಶೀಘ್ರವೇ ಈತನ ಹೆಸರನ್ನು ‘ವಿಮಾನ ಹಾರಾಟ ನಿರ್ಬಂಧಿತರ’ (ನೋ ್ಲೆ‘ ಲಿಸ್ಟ್) ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ.
