ಎಡಿನ್‌ಬರ್ಗ್‌ (ಜು.11): ವಿಮಾನದಲ್ಲಿ ಪ್ರಯಾಣಿಸುವಾಗ ನಿಗದಿತ ಭಾರದ ಲಗೇಜ್ ಒಯ್ಯುವುದಕ್ಕೆ ಮಾತ್ರ ಅನುಮತಿ ಇದ್ದು, ಲಗೇಜ್ ಶುಲ್ಕ ಕೊಡಲೇ ಬೇಕು. ಆದರೆ ತಮ್ಮದೇ ಲಗೇಜ್‌ ಶುಲ್ಕ ಪಾವತಿಸದೇ ತಪ್ಪಿಸಿಕೊಳ್ಳಲು ಕ್ರಿಯೇಟಿವ್ ಐಡಿಯಾ ಮಾಡಿದ ವ್ಯಕ್ತಿಯೊಬ್ಬನ ವಿಡಿಯೋ ನೆಟ್ಟಿಗರನ್ನು ನಗಡೆಗಡಲಲ್ಲಿ ತೇಲಿಸಿದೆ. ಹಾಗೇಯೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂದ ಹಾಗೇ ತನ್ನ ವಿಚಿತ್ರ ಐಡಿಯಾ ಫೇಲ್ ಆಗಿ ತಮಾಷೆಗೆ ಗುರಿಯಾಗಿರೋದು ಸ್ಕಾಟ್ಲೆಂಡ್‌ನ ಜಾನ್‌ ಇರ್ವಿನ್‌ ಎಂಬಾತ.

ವಿಮಾನದ ಲಗೇಜ್‌ ತೂಕ ಜಾಸ್ತಿ ಇದ್ದರೆ ಅದನ್ನು ಒಯ್ಯಲು ಬಿಡುವುದಿಲ್ಲ. ಇಲ್ಲವೇ ಅದಕ್ಕೆ ಹೆಚ್ಚುವರಿ ಶುಲ್ಕ ಪಾವತಿಸಬೇಕು. ಇವೆರಡನ್ನೂ ಮಾಡಲು ತಯಾರಿಲ್ಲದ ಇರ್ವಿನ್ 15 ಶರ್ಟ್‌ಗಳನ್ನು ಧರಿಸಿ ಏರ್ಪೋರ್ಟ್‌ಗೆ ಬಂದು ಭದ್ರತಾ ಸಿಬ್ಬಂದಿಯ ಕೈಗೆ ಸಿಕ್ಕಿಬಿದ್ದ ಪ್ರಸಂಗವೊಂದು ಜರುಗಿದೆ. ತನ್ನ ಲಗೇಜ್‌ನ ತೂಕ 43 ಕೆ.ಜಿ.ಗಿಂತ ಹೆಚ್ಚಾಗುವುದನ್ನು ತಪ್ಪಿಸಲು, 8 ಕೆ.ಜಿ.ಯಷ್ಟುತೂಕದ ಶರ್ಟ್‌ಗಳನ್ನು ಧರಿಸಿ ಫ್ರಾನ್ಸ್‌ನ ನೈಸ್‌ ಏರ್ಪೋಟಿಗೆ ಬಂದಿದ್ದ. ಆದರೆ, ತಪಾಸಣೆ ವೇಳೆ ಈತನ ಬಣ್ಣ ಬಯಲಾಗಿದೆ.