ತಕ್ಷಣವೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ವೇಳೆ ಸಿಎಂ ಆತನಿಗೆ ಏನು ನ್ಯಾಯಬೇಕು ಕೇಳಿ, ನ್ಯಾಯ ಕೊಡಿಸೋಣ ಎಂದು ಹೇಳಿ ಭಾಷಣ ಮುಂದುವರೆಸಿದರು.

ಬೆಂಗಳೂರು (ನ.01): ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ 61ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಿಎಂ ಮಾತನಾಡುತ್ತಿದ್ದ ವೇಳೆ ಮೈಸೂರಿನ ಕುಕ್ಕರಹಳ್ಳಿಯ ಎಂ. ಪರಶುರಾಮ್ ಎಂಬಾತ, ನ್ಯಾಯ ಕೊಡಿ ಎಂದು ಪತ್ರ ಹಿಡಿದು ವೇದಿಕೆ ಕಡೆ ನುಗ್ಗಲು ಯತ್ನಿಸಿದರು.

ತಕ್ಷಣವೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ವೇಳೆ ಸಿಎಂ ಆತನಿಗೆ ಏನು ನ್ಯಾಯಬೇಕು ಕೇಳಿ, ನ್ಯಾಯ ಕೊಡಿಸೋಣ ಎಂದು ಹೇಳಿ ಭಾಷಣ ಮುಂದುವರೆಸಿದರು.

ಪರಶುರಾಮ್​​ ಕೆಪಿಎಸ್ಸಿಯಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆದಿರುವುದನ್ನು ಮಾನ್ಯ ಮಾಡಿಲ್ಲ. ಅಲ್ಲದೇ ಕನ್ನಡದಲ್ಲಿ ಪರೀಕ್ಷೆ ಬರೆದಿದ್ದಕ್ಕೆ ನೋಟಿಸ್​ ಕೊಟ್ಟಿದ್ದಾರೆ. ಇದರಿಂದಾಗಿ ತನ್ನ ವೈವಾಹಿಕ ಜೀವನ ಅಂತ್ಯವಾಗಿದೆ, ಸರ್ಕಾರ ಪರಿಹಾರ ಕೊಡಬೇಕೆಂದು ಪರಶುರಾಮ್​ ಆಗ್ರಹಿಸಿದ್ದಾರೆ.