ವಿಗ್‌ನ ಅಡಿಯಲ್ಲಿ 1 ಕೆಜಿ ಚಿನ್ನ ಇಟ್ಟು ಕಳ್ಳ ಸಾಗಣೆ| ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸೆರೆ| 

ಕೊಚ್ಚಿ[ಅ.06]: ಚಪ್ಪಲಿಯ ಒಳಗೆ, ದೇಹದ ಅಂಗಾಗಳ ಒಳಗೆ ಬಚ್ಚಿಟ್ಟು ಚಿನ್ನ ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದ ಹಲವಾರು ನಿದರ್ಶನಗಳನ್ನು ನೋಡಿದ್ದೇವೆ. ಇದಕ್ಕೆ ಉದಾರಹಣೆ ಎಂಬಂತೆ, ವಿಗ್‌ನ ಒಳಗಡೆ ಚಿನ್ನ ಬಚ್ಚಿಟ್ಟು ಕಳ್ಳಸಾಗಣೆಗೆ ಯತ್ನಿಸಿದ್ದ ಯುವಕನೊಬ್ಬ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ಮಗ್ಲರ್ ಪಟ್ಟಿಯಲ್ಲಿ ಸುಮಲತಾ, ದರ್ಶನ್, ಯಶ್ ಸಂಖ್ಯೆ?

ಶಾರ್ಜಾದಿಂದ ಶುಕ್ರವಾರ ಮುಂಜಾನೆ ಆಗಮಿಸಿದ ಮಲಪುರಂ ನಿವಾಸಿ ನೌಶದ್‌ ಎಂಬಾತ ವಿಗ್‌ನ ಅಡಿಯಲ್ಲಿ 1.13 ಕೆ.ಜಿ. ಚಿನ್ನ ಅಡಗಿಸಿ ಇಟ್ಟಿದ್ದು ತಪಾಸಣೆಯ ವೇಳೆ ಪತ್ತೆಯಾಗಿದೆ. ಚಿನ್ನವನ್ನು ಇರಿಸುವ ಸಲುವಾಗಿ ಆತ ತಲೆಯ ಮಧ್ಯ ಭಾಗವನ್ನು ಶೇವ್‌ ಮಾಡಿಕೊಂಡಿದ್ದ.

ಏರ್‌ಪೋರ್ಟ್‌ ಹೋಟೆಲಿಗೆ ಹೋಗೋ ಮುನ್ನ ಪರ್ಸ್‌ ನೋಡಿಕೊಳ್ಳಿ!

ಚಿನ್ನವನ್ನು ಇಟ್ಟು ಅದರ ಮೇಲೆ ವಿಗ್‌ ಧರಿಸಿಕೊಂಡು ನಿಲ್ದಾಣಕ್ಕೆ ಬಂದಿದ್ದ. ಆತ ಚಿನ್ನ ಕಳ್ಳಸಾಗಣೆ ಜಾಲದ ಸದಸ್ಯನಾಗಿದ್ದಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದು, ತನಿಖೆಗೆ ಒಳಪಡಿಸಿದ್ದಾರೆ