ಚುಡಾಯಿಸಿದ್ದಕ್ಕೆ ಹುಡುಗಿ ಕಡೆಯವರು ಅಭಿಷೇಕ್​’ನನ್ನು ಕರೆಸಿ ತೋಟದ ಮನೆಯಲ್ಲಿ ಕಟ್ಟಿಹಾಕಿ ವಿವಸ್ತ್ರಗೊಳಿಸಿದ್ದಾರೆ.

ತುಮಕೂರು (ಜ.18): ಬಾಲಕಿಯನ್ನು ಚುಡಾಯಿಸಿದಕ್ಕೆ ಬೆತ್ತಲೆಗೊಳಿಸಿ ಯುವಕನಿಗೆ ಚಪ್ಪಲಿಹಾರ ಹಾಕಿ ಅಮಾನುಷವಾಗಿ ಹಿಂಸಿದ ಘಟನೆ ಗುಬ್ಬಿ ಪಟ್ಟಣದಲ್ಲಿ ನಡೆದಿದೆ.

ಇಲ್ಲಿನ ಎಸ್​ಸಿ ಎಸ್​ಟಿ ಕಾಲೋನಿಯ ಅಭಿಷೇಕ್’ಗೆ ಅಮಾನವೀಯವಾಗಿ ಹಿಂಸೆ ನೀಡಲಾಗಿದೆ. ಕಳೆದ ಭಾನುವಾರ ಈ ಘಟನೆ ನಡೆದಿದ್ದು ವಾಟ್ಸಪ್’ನಲ್ಲಿ ವಿಡಿಯೋ ವೈರಲ್​ ಆಗಿದೆ.

ಚುಡಾಯಿಸಿದ್ದಕ್ಕೆ ಹುಡುಗಿ ಕಡೆಯವರು ಅಭಿಷೇಕ್​’ನನ್ನು ಕರೆಸಿ ತೋಟದ ಮನೆಯಲ್ಲಿ ಕಟ್ಟಿಹಾಕಿ ವಿವಸ್ತ್ರಗೊಳಿಸಿದ್ದಾರೆ.

ದಲಿತ ಎಂಬ ಕಾರಣಕ್ಕೆ ಸವರ್ಣೀಯರು ಚಪ್ಪಲಿ ಹಾರ ಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.