ಒಂದರ ಮೇಲೊಂದು ಒಳ ಉಡುಪು ಧರಿಸಿ ಅದರಲ್ಲಿ ಚಿನ್ನವನ್ನು ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. 

ಬೆಂಗಳೂರು : ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. 

 ಶಾರ್ಜಾ ದಿಂದ ಭಾರತಕ್ಕೆ ಅಕ್ರಮವಾಗಿ 36 ವರ್ಷದ ಶಕೇನ್ ಶೇಕ್ ಒಳ ಉಡುಪಿನಲ್ಲಿ 26 ‌ಲಕ್ಷ ಮೌಲ್ಯದ ಚಿನ್ನವನ್ನು ಸಾಗಣೆ ಮಾಡುತ್ತಿದ್ದ.

ಅಬುಧಾಬಿಯಿಂದ ಮುಂಬೈಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬಂದಿದ್ದ ಶಕೇನ್ ಒಳ ಉಡುಪಿನಲ್ಲಿ ಚಿನ್ನದ ಪೌಡರ್ ಮತ್ತು ಪೇಸ್ಟ್ ಮಾಡಿ ತರುತ್ತಿದ್ದ. ಒಂದರ ಮೇಲೆ ಒಂದು ಒಳ ಉಡುಪು ಧರಿಸಿ ಅದರಲ್ಲಿ ಚಿನ್ನವನ್ನು ಇರಿಸಿಕೊಂಡಿದ್ದ.

 ಅನುಮಾನಾಸ್ಪದವಾಗಿ ಕಂಡು ಬಂದ ಈತನನ್ನು ಪರಿಶೀಲನೆ ನಡೆಸಿದ ವೇಳೆ ಈತನ ಬಳಿ ಒಟ್ಟು 853 ಗ್ರಾಂ ಚಿನ್ನ ಪತ್ತೆಯಾಗಿದೆ. ಬಳಿಕ ಈತನ ಬಳಿ ಇದ್ದ ಚಿನ್ನವನ್ನು ಪೊಲೀಸರು ವಶಡಿಸಿಕೊಂಡಿದ್ದಾರೆ. ಅಲ್ಲದೇ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.