ಗೆಳೆಯನ ಜೊತೆ ಮಲಗಲು ನಿರಾಕರಿಸಿದ ಪತ್ನಿಯ ತಲೆ ಬೋಳಿಸಿದ!

Man shaves wife’s head after she refuses to sleep with another guy for money
Highlights

ಗೆಳೆಯನ ಜೊತೆ ಮಲಗಲು ನಿರಾಕರಿಸಿದ ಪತ್ನಿ

ಪತ್ನಿ ತಲೆ ಬೋಳಿಸಿದ ಪಾಪಿ ಪತಿ

ಹಣಕ್ಕಾಗಿ ಹಾಸಿಗೆ ಹಂಚಿಕೊಳ್ಳುವಂತೆ ಒತ್ತಾಯ

ಪಾಪಿ ಪತಿಯನ್ನು ಬಂಧಿಸಿದ ಪೊಲೀಸರು

ಶಹಜನಪುರ್(ಜು.4): ಗೆಳೆಯನೊಂದಿಗೆ ಹಾಸಿಗೆ ಹಂಚಿಕೊಳ್ಳಲು ನಿರಾಕರಿಸಿದ ಕಾರಣಕ್ಕೆ ಪತಿಯೋರ್ವ ತನ್ನ ಪತ್ನಿಯ ತಲೆ ಬೋಳಿಸಿರುವ ಘಟನೆ ಉತ್ತರಪ್ರದೇಶದ ಶಹಜನಪುರ್ ನಲ್ಲಿ ನಡೆದಿದೆ.

ಇಲ್ಲಿನ ಅಶೋಕ್ ಕುಮಾರ್ ಎಂಬ ವ್ಯಕ್ತಿ ಹಣಕ್ಕಾಗಿ ತನ್ನ ಗೆಳೆಯನೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಹೆಂಡತಿಯನ್ನು ಪೀಡಿಸುತ್ತಿದ್ದ. ಆದರೆ ಹೆಂಡತಿ ಈ ಅಕ್ರಮಕ್ಕೆ ವಿರೋಧ ತೋರಿದಾಗ ಆಕೆ ಮೇಲೆ ಹಲ್ಲೆ ನಡೆಸಿ ಆಕೆಯ ತಲೆಯನ್ನು ಬೋಳಿಸಿದ್ದಾನೆ.

ಖುಷ್ಬು ಮತ್ತು ಅಶೋಕ್ ಕಳೆದ ೯ ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಅಕ್ರಮ ಮದ್ಯ ಮಾರಾಟ ಜಾಲದಲ್ಲಿ ಕೆಲಸ ಮಾಡುತ್ತಿದ್ದ ಅಶೋಕ್, ಹಣಕ್ಕಾಗಿ ಬೇರೊಬ್ಬನ ಜೊತೆ ಮಲಗುವಂತೆ ಹೆಂಡತಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಅಶೋಕ್ ಅಕ್ರಮ ಮದ್ಯ ಮಾರಾಟ ಜಾಲ ಪ್ರಕರಣದಲ್ಲಿ ಈ ಹಿಂದೆಯೂ ಹಲವು ಬಾರಿ ಬಂಧನಕ್ಕೊಳಗಾಗಿದ್ದ ಎನ್ನಲಾಗಿದೆ.

ಸದ್ಯ ಖುಷ್ಬು ನೀಡಿದ ದೂರಿನ ಆಧಾರದ ಮೇಲೆ ಅಶೋಕ್ ಮತ್ತು ಆತನ ಸಹೋದರನನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

loader