ಲಿವರ್‌ಪುಲ್(ಜ.08): ಈ ದಂಪತಿಗೆ ಮಕ್ಕಳಾಗಿ ಬರೋಬ್ಬರಿ 21 ವರ್ಷ ಕಳೆದಿವೆ. ಇಷ್ಟು ವರ್ಷ ಚೆಂದದ ಸಂಸಾರ ನಡೆಸಿದ ಈ ದಂಪತಿ, ಇದೀಗ ಮಕ್ಕಳ ವಿಷಯದಲ್ಲಿ ಕಿತ್ತಾಡಿಕೊಂಡಿದ್ದಾರೆ. 

ಹೌದು, ಅಮೆರಿಕದ ಲಿವರ್‌ಪುಲ್‌ನ ಪ್ರಸಿದ್ಧ ಉದ್ಯಮಿ ರಿಚರ್ಡ್ ಮ್ಯಾಸನ್, ಇತ್ತೀಚಿಗಷ್ಟೇ ತಮ್ಮ ಪತ್ನಿ ಕೇಟ್‌ಳಿಗೆ ವಿಚ್ಛೇದನ ನೀಡಿದ್ದಾನೆ. ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ತನ್ನ ಮೂವರೂ ಮಕ್ಕಳು ನನ್ನವಲ್ಲ ಎಂದು ಹೇಳಿಕೆ ನೀಡಿದ್ದಾನೆ.

ಮ್ಯಾಸನ್ ಪ್ರಕಾರ ಆತ ಈಗಾಗಲೇ ಸಿಸ್ಟಿಕ್ ಫೈಬ್ರೋಸಿಸ್ ಸ್ಥಿತಿಯಲ್ಲಿದ್ದು, ಆತನಿಂದ ಮಕ್ಕಳನ್ನು ಹೊಂದಲು ಸಾಧ್ಯವೇ ಇಲ್ಲ. ಸಿಸ್ಟಿಕ್ ಫೈಬ್ರೋಸಿಸ್ ಅಂದರೆ ಪುರುಷರು ಮಕ್ಕಳನ್ನು ಪಡೆಯದ ಸ್ಥಿತಿ. ಅದರಂತೆ ಮ್ಯಾಸನ್ ಕೂಡ ತನ್ನಿಂದ ಮಕ್ಕಳನ್ನು ಹೊಂದಲು ಸಾಧ್ಯವಿಲ್ಲ, ಆದರೂ ತಮಗೆ ಮೂವರು ಮಕ್ಕಳು ಹೇಗೆ ಹುಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾನೆ.

2016ರಲ್ಲೇ ಈ ಕುರಿತು ತನ್ನ ವೈದ್ಯ ಮಾಹಿತಿ ನೀಡಿದ್ದು, ಅದರಂತೆ ಇದೀಗ ತನ್ನ ಮಾಜಿ ಪತ್ನಿ ವಿರುದ್ಧ ಮ್ಯಾಸನ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾನೆ. ಅಂದಹಾಘೆ ರಿಚರ್ಡ್ ಮ್ಯಾಸನ್ ಗೆ 23 ವ಼ರ್ಷದ ಓರ್ವ ಮತ್ತು 19 ವರ್ಷದ ಅವಳಿ ಗಂಡು ಮಕ್ಕಳಿದ್ದಾರೆ.