ಮದುವೆ ಅಂದ್ರೆ ಎಲ್ರಿಗೂ ಖುಷಿ ಇರುತ್ತೆ. ಆದರೆ ಕನ್ಫ್ಯೂಷನ್​ ಇರುತ್ತಾ? ಅರೆ, ಮದುವೆ ಟೈಮಲ್ಲಿ ಅದೆಂಥಾದ್ರೀ ಕನ್ಫ್ಯೂಷನ್​ ಅಂತೀರಾ? ತೆಲಂಗಾಣದಲ್ಲಿ ಒಂದು ಮದುವೆ ನಡೆದಿತ್ತು. ಇಲ್ಲಿದೆ ನೋಡಿ ವಿವರ.

ತೆಲ್ಲಂಗಾನ(ಅ.10): ಮದುವೆ ಅಂದ್ರೆ ಎಲ್ರಿಗೂ ಖುಷಿ ಇರುತ್ತೆ. ಆದರೆ ಕನ್ಫ್ಯೂಷನ್​ ಇರುತ್ತಾ? ಅರೆ, ಮದುವೆ ಟೈಮಲ್ಲಿ ಅದೆಂಥಾದ್ರೀ ಕನ್ಫ್ಯೂಷನ್​ ಅಂತೀರಾ? ತೆಲಂಗಾಣದಲ್ಲಿ ಒಂದು ಮದುವೆ ನಡೆದಿತ್ತು. ಇಲ್ಲಿದೆ ನೋಡಿ ವಿವರ.

ಆ ಮದುವೆಲ್ಲಿ ಗಂಡನಿಗೆ ಅಕ್ಷತೇನ ಯಾರ ತಲೆಮೇಲೆ ಹಾಕಲಿ ಎನ್ನುವುದೇ ಕನ್ಫ್ಯೂಷನ್ ಆಗಿತ್ತು. ಯಾಕಂದ್ರೆ ಅಲ್ಲಿ ಅವನು ಮದುವೆ ಆಗಿದ್ದು ಇಬ್ಬರು ಹೆಂಡ್ತಿರನ್ನ. ಮೂರೂ ಕುಟುಂಬದವರ ಒಪ್ಪಂದದ ಮೇರೆಗೇ ಈ ಮದುವೆ ನಡೆಯಿತು. ಆದರೆ ಇಬ್ಬರು ಹೆಂಡಿರ ನಡುವೆ ಸಿಕ್ಕಾಕೊಂಡ ಗಂಡನ ಸ್ಥಿತಿ ನಿಜಕ್ಕೂ ಫಜೀತಿಯಾಗಿತ್ತು. ಯಾಕಂದ್ರೆ ಆ ಕಡೆಯಿಂದ ಇಬ್ಬರೂ ಹೆಂಡ್ತೀರು ಗಂಡನ ತಲೆ ಮೇಲೆ ಅಕ್ಷತೆ ಕಾಳ್ ಹಾಕುತ್ತಿದ್ದರೆ, ಗಂಡ ಯಾರಿಗೆ ಅಕ್ಷತೆ ಹಾಕ್ಬೇಕು ಅಂತಾನೇ ಕನ್ಫ್ಯೂಸ್ ಆಗ್ತಿದ್ದ. ಈ ಕನ್ಫ್ಯೂಷನ್ ನಡುವೇನೇ ಮದುವೆ ಮುಗಿದ್ಹೋಗಿತ್ತು..