ನೋಟ್ ಬ್ಯಾನ್ ಬಳಿಕ ದೆಹಲಿಯ ಇಮ್ತಿಯಾಜ್ ಅಲಾಂ, 20,000 ಹಣ ಡ್ರಾ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ  ದೆಹಲಿಯ ಜಾಮಿಯಾ ಕೋ ಆಪರೇಟಿವ್ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದಾಗ ನೋಟು ವಿನಿಮಯವಾದರೆ ದಿನಕ್ಕೆ 2 ಸಾವಿರ ರೂಪಾಯಿ ಮಾತ್ರ ವಿನಿಮಯ ಮಾಡಿಕೊಳ್ಳಬಹುದು ಎಂದಿದ್ದಾರೆ. ಆದರೆ, ತನಗೆ ತುರ್ತಾಗಿ ಹಣ ಬೇಕೆಂದು ಅಲಾಂ ಮ್ಯಾನೇಜರ್ ಗೆ ಮನವಿ ಮಾಡಿಕೊಂಡಿದ್ದಾರೆ. ಇವರ ಮನವಿಗೆ ಸ್ಪಂದಿಸಿದ ಬ್ಯಾಂಕ್ ಸಿಬ್ಬಂದಿ ಸೆಲ್ಫ್ ಚೆಕ್ ಮೂಲಕ ಹಣ ಡ್ರಾ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ, ನೋಟುಗಳನ್ನು ನೀಡಲು ಆಗುವುದಿಲ್ಲ. 10 ರೂಪಾಯಿ ನಾಣ್ಯವನ್ನೇ ತೆಗೆದುಕೊಳ್ಳುವಂತೆ ಹೇಳಿದ್ದಾರೆ. 15  ನಿಮಿಷಗಳ ಕಾಲ ಯೋಚಿಸಿದ ಅಲಾಂ ಬಳಿಕ ವಿಧಿ ಇಲ್ಲದೆ ನಾಣ್ಯಗಳನ್ನೇ ಸ್ವೀಕರಿಸಿದ್ದಾರೆ.

ನವದೆಹಲಿ(ನ.19): ದೇಶದಲ್ಲಿ 500, 1000 ರೂಪಾಯಿ ಮುಖಬೆಲೆಯ ನೋಟುಗಳ ನಿಷೇಧದ ಬಿಸಿ ಇನ್ನೂ ಮುಂದುವರರೆದಿದೆ. ಹಲವು ಬ್ಯಾಂಕ್, ಎಟಿಎಂಗಳ ಮುಂದೆ ಜನರ ಕ್ಯೂ ಕಡಿಮೆಯಾಗಿಲ್ಲ. ಆದರೆ, ಇಲ್ಲೊಂದು ಬ್ಯಾಂಕ್ ಹಣ ವಿನಿಮಯಕ್ಕೆ ಬಂದ ವ್ಯಕ್ತಿಗೆ ಬರೀ ನಾಣ್ಯಗಳನ್ನೇ ನೀಡಿದೆ. ಅಷ್ಟಿಷ್ಟಲ್ಲ ಬರೋಬ್ಬರಿ 2 ಸಾವಿರ ನಾಣ್ಯಗಳು.

ನೋಟ್ ಬ್ಯಾನ್ ಬಳಿಕ ದೆಹಲಿಯ ಇಮ್ತಿಯಾಜ್ ಅಲಾಂ, 20,000 ಹಣ ಡ್ರಾ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ದೆಹಲಿಯ ಜಾಮಿಯಾ ಕೋ ಆಪರೇಟಿವ್ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದಾಗ ನೋಟು ವಿನಿಮಯವಾದರೆ ದಿನಕ್ಕೆ 2 ಸಾವಿರ ರೂಪಾಯಿ ಮಾತ್ರ ವಿನಿಮಯ ಮಾಡಿಕೊಳ್ಳಬಹುದು ಎಂದಿದ್ದಾರೆ. ಆದರೆ, ತನಗೆ ತುರ್ತಾಗಿ ಹಣ ಬೇಕೆಂದು ಅಲಾಂ ಮ್ಯಾನೇಜರ್ ಗೆ ಮನವಿ ಮಾಡಿಕೊಂಡಿದ್ದಾರೆ. ಇವರ ಮನವಿಗೆ ಸ್ಪಂದಿಸಿದ ಬ್ಯಾಂಕ್ ಸಿಬ್ಬಂದಿ ಸೆಲ್ಫ್ ಚೆಕ್ ಮೂಲಕ ಹಣ ಡ್ರಾ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ, ನೋಟುಗಳನ್ನು ನೀಡಲು ಆಗುವುದಿಲ್ಲ. 10 ರೂಪಾಯಿ ನಾಣ್ಯವನ್ನೇ ತೆಗೆದುಕೊಳ್ಳುವಂತೆ ಹೇಳಿದ್ದಾರೆ. 15 ನಿಮಿಷಗಳ ಕಾಲ ಯೋಚಿಸಿದ ಅಲಾಂ ಬಳಿಕ ವಿಧಿ ಇಲ್ಲದೆ ನಾಣ್ಯಗಳನ್ನೇ ಸ್ವೀಕರಿಸಿದ್ದಾರೆ.

ತುರ್ತಾಗಿ ನಗದು ಬೇಕಾಗಿದ್ದರಿಂದ ಇಮ್ತಿಯಾಜ್ ಅಲಾಂ ಕೂಡ ನಾಣ್ಯಗಳನ್ನ ಸ್ವೀಕರಿಸಿದ್ದಾರೆ. 20,000 ಮೊತ್ತಕ್ಕೆ ಬರೋಬ್ಬರಿ 10 ರೂ. 2000 ನ್ಯಾಣಗಳು ಇವರಿಗೆ ಸಿಕ್ಕಿವೆ.. ಈ ನಾಣ್ಯ ಸುಮಾರು 15 ಕೆ.ಜಿ. ತೂಕ ಇವೆ. ಒಟ್ಟಾರೆ. ಸದ್ಯಕ್ಕಂತೂ ಇವರ ಮನೆಯಲ್ಲೂ ನಾಣ್ಯಗಳದ್ದೇ ಕಾರುಬಾರು.