ಕೇವಲ 20 ಸಾವಿರ ರೂ.ನಲ್ಲಿ ಅದ್ಧೂರಿ ಮದುವೆ| ಕಡಿಮೆ ಬಜೆಟ್‌ನಲ್ಲಿ ಫುಲ್ ಹ್ಯಾಪಿ ಮದುವೆ ಹೇಗೆ?| ಪಾಕಿಸ್ತಾನದ ರಿಜ್ವಾನ್ ಪೆಹಲ್ವಾನ್ ಮದುವೆ ಸಿಕ್ರೇಟ್| ಸಾಮಾಜಿಕ ಜಾಲತಾಣದಲ್ಲಿ ರಿಜ್ವಾನ್ ಮದುವೆ ಬಜೆಟ್ ನದ್ದೇ ಮಾತು
ಇಸ್ಲಾಮಾಬಾದ್(ಡಿ.25): ಇತ್ತೀಚಿಗಷ್ಟೇ ರಿಲಯನ್ಸ್ ಇಂಡಸ್ಟ್ರಿ ಅಧಿಪತಿ ಮುಕೇಶ್ ಅಂಬಾನಿ, ಸುಮಾರು 700 ಕೋಟಿ(ತಮ್ಮ ಒಟ್ಟು ಆದಾಯದ ಶೇ.1ರಷ್ಟು ಮಾತ್ರ) ರೂ. ಖರ್ಚು ಮಾಡಿ ತಮ್ಮ ಮಗಳ ಮದುವೆ ಮಾಡಿ ಸುದ್ದಿಯಾಗಿದ್ದರು.
ಅದರಂತೆ ದೇಶದಲ್ಲಿ ನಿತ್ಯ ಸಾವಿರಾರು ಮದುವೆಗಳಾಗುತ್ತವೆ. ಮದುವೆಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವಿದೆ. ಇದೇ ಕಾರಣಕ್ಕೆ ಮದುವೆಗೆ ತಮ್ಮ ಬಜೆಟ್ ಮೀರಿ ಹಣ ಖರ್ಚು ಮಾಡುವುದು ಸಾಮಾನ್ಯ.
ಅದರಲ್ಲೂ ಮಧ್ಯಮ ವರ್ಗದ ಜನ ತಮ್ಮ ಮಕ್ಕಳ ಮದುವೆಗೆಂದೇ ಜೀವಮಾನವವೆಲ್ಲಾ ದುಡಿದು ಕೂಡಿಟ್ಟ ಹಣವನ್ನು ನೀರಿನಿಂತೆ ಖರ್ಚು ಮಾಡುತ್ತಾರೆ.
ಆದರೆ ಪಕ್ಕದ ಪಾಕಿಸ್ತಾನದಲ್ಲೋರ್ವ ಆಸಾಮಿ ತನ್ನ ಮದುವೆಗೆ ಕೇವಲ 20 ಸಾವಿರ (ಭಾರತೀಯ ಕರೆನ್ಸಿ ಪ್ರಕಾರ 10 ಸಾವಿರ)ರೂ. ಖರ್ಚು ಮಾಡಿದ್ದಾನೆ. ಅಲ್ಲದೇ ಹೇಗೆ ಅತ್ಯಂತ ಕಡಿಮೆ ಬಜೆಟ್ ನಲ್ಲಿ ತನ್ನ ಮದುವೆಯಾಯ್ತು ಎಂಬುದನ್ನು ಆತ ವಿವರಿಸಿದ್ದಾನೆ.
ಪಾಕಿಸ್ತಾನದ ರಿಜ್ವಾನ್ ಪೆಹಲ್ವಾನ್ ಎಂಬಾತ ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾನೆ. ಅದೂ ಕೇವಲ 20 ಸಾವಿರ ರೂ. ನಲ್ಲಿ ರಿಜ್ವಾನ್ ತನ್ನ ಮದುವೆ ಮುಗಿಸಿದ್ದಾನೆ.
ಇನ್ನು ಅತ್ಯಂತ ಕಡಿಮೆ ಬಜೆಟ್ ನಲ್ಲಿ ತನ್ನ ಮದುವೆ ಆಗಿದ್ದೇಗೆ ಎಂಬುದನ್ನು ರಿಜ್ವಾನ್ ಟ್ವಿಟ್ಟರ್‌ನಲ್ಲಿ ವಿವರಿಸಿದ್ದು, ಅದನ್ನು ನೀವು ಇಲ್ಲಿ ನೋಡಬಹುದು.
ರಿಜ್ವಾನ್ ಮದುವೆ ಪ್ಲ್ಯಾನ್‌ಗೆ ಬಹುತೇಕ ಯುವಕ, ಯುವತಿಯರು ಸೋತಿದ್ದು, ತಾವೂ ಕೂಡ ಹೀಗೆ ಮದುವೆಯಾದರೆ ಚೆನ್ನ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಪೋಸ್ಟ್ ಮಾಡುತ್ತಿದ್ದಾರೆ.
