ಅಂಬಾರಗೋಡ್ಲು ದಡದಿಂದ ಕಳಸವಳ್ಳಿ ದಡಕ್ಕೆ ಮಂಗಳವಾರ ಮಧ್ಯಾಹ್ನ 4ರ ಸುಮಾರಿಗೆ ಲಾಂಚ್ ಹೋಗುತ್ತಿದ್ದಾಗ ಸುಮಾರು 50 ರಿಂದ 60 ವರ್ಷದ ವ್ಯಕ್ತಿಯೊಬ್ಬರು ಏಕಾಏಕಿ ಲಾಂಚ್‌'ನಿಂದ ಹಿನ್ನೀರಿಗೆ ಹಾರಿದ್ದಾರೆ.

ಸಾಗರ(ಸೆ.06): ತಾಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವಿನ ಹಿನ್ನೀರಿನಲ್ಲಿ ವ್ಯಕ್ತಿಯೊಬ್ಬ ಲಾಂಚ್'ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಂಬಾರಗೋಡ್ಲು ದಡದಿಂದ ಕಳಸವಳ್ಳಿ ದಡಕ್ಕೆ ಮಂಗಳವಾರ ಮಧ್ಯಾಹ್ನ 4ರ ಸುಮಾರಿಗೆ ಲಾಂಚ್ ಹೋಗುತ್ತಿದ್ದಾಗ ಸುಮಾರು 50 ರಿಂದ 60 ವರ್ಷದ ವ್ಯಕ್ತಿಯೊಬ್ಬರು ಏಕಾಏಕಿ ಲಾಂಚ್‌'ನಿಂದ ಹಿನ್ನೀರಿಗೆ ಹಾರಿದ್ದಾರೆ. ಇದರಿಂದ ಲಾಂಚ್‌'ನಲ್ಲಿ ಪ್ರಯಾಣಿಸುತ್ತಿದ್ದವರು ಗಾಬರಿಯಾಗಿದ್ದಾರೆ.

ತಕ್ಷಣ ಲಾಂಚ್ ಸಿಬ್ಬಂದಿಗಳು ಜೀವ ರಕ್ಷಕವನ್ನು ನೀರಿಗೆ ಎಸೆದು ವ್ಯಕ್ತಿಗೆ ಹಿಡಿದುಕೊಳ್ಳಲು ತಿಳಿಸಿದ್ದಾರೆ. ಇದಕ್ಕೆ ವ್ಯಕ್ತಿ ಸ್ಪಂದಿಸದೆ ಇದ್ದಾಗ ಲಾಂಚ್ ಸಿಬ್ಬಂದಿಗಳು ನೀರಿಗೆ ಹಾರಿ ವ್ಯಕ್ತಿಯನ್ನು ಅಂಬಾರಗೋಡ್ಲು ದಡಕ್ಕೆ ಕರೆ ತಂದು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಆದರೆ ತೀರ ಬಳಲಿದ್ದ ವ್ಯಕ್ತಿಯು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.