ಚಾಮರಾಜನಗರ, [ನ.02]: ಹೆಂಡತಿ ಜೊತೆ ಕೋಪ ಮಾಡಿಕೊಂಡು ವ್ಯಕ್ತಿಯೊಬ್ಬ ಟವರ್ ಏರಿದ ಘಟನೆ ಚಾಮರಾಜನಗರ ತಾಲೂಕಿನ ವೆಂಕಟಯ್ಯನ ಛತ್ರದ ಬಳಿ ನಡೆದಿದೆ. 

ಮಹೇಶ್ ಎಂಬಾತ ಕಂಠಪೂರ್ತಿ ಕುಡಿದು ಹೆಂಡತಿಗೆ ಬಡಿದು ಗಲಾಟೆ ಮಾಡ್ತಿದ್ದ. ಇದರಿಂದ ಆತನ ಹೆಂಡತಿ ಜಯಲಕ್ಷ್ಮಿ ಪಂಚಾಯತಿ ಸೇರಿಸಿ ಇಬ್ಬರು ಬೇರೆ ಬೇರೆ ಇರುವಂತೆ ತೀರ್ಮಾನ ಮಾಡಿದ್ರು. 

ಈತನಿಗೆ ತನ್ನ ಹೆಂಡತಿಯನ್ನು ಬಿಟ್ಟಿರಲಾಗದೇ, ನನಗೆ ಹೆಂಡತಿ ಬೇಕು ಎಂದು ಹೇಳಿ ಟವರ್ ಏರಿ ಕುಳಿತಿದ್ದ. ವಿಷಯ ತಿಳಿದ ಚಾಮರಾಜನಗರ ಪೂರ್ವ ಗ್ರಾಮಾಂತರ ಪೊಲೀಸರು ಹಾಗು ಅಗ್ನಿಶಾಮಕದಳದ ಸಿಬ್ದಂದಿ ಮಹೇಶ್ನನ್ನು ಕೆಳಗಿಳಿಸಲು ಹರಸಾಹಸ ಪಡಬೇಕಾಯಿತು. 

ಕೊನೆಗೆ ಟವರ್ ಏರಿದ್ದ ಮಹೇಶ್ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.