20ರ ಹರೆಯದ ಈ ಯುವಕನ ಅಸಲಿ ಹೆಸರು ಅಲೆಕ್ಸಾಂಡರ್ ಟ್ಯುರಿನ್. ವಾಸ್ತವವಾಗಿ ಇಲ್ಲಿನ ಎಲೆಕ್ಟ್ರೋನಿಕ್ ಸ್ಟೋರ್ ಒಂದು ತಮ್ಮ ಹೆಸರನ್ನು ಅಧಿಕೃತವಾಗಿ ಬದಲಾಯಿಸಿ 'ಐಫೋನ್ ಸೆವೆನ್' ಎಂದಿಟ್ಟುಕೊಳ್ಳುವ ಮೊದಲ 5 ಮಂದಿಗೆ ಆ್ಯಪಲ್ ಕಂಪೆನಿಯ ಲೇಟೆಸ್ಟ್ ಫೋನ್ ನೀಡುವುದಾಗಿ ಘೋಷಿಸಿತ್ತು. ಆ್ಯಪಲ್ ಕಂಪೆನಿ ಫೋನ್ ಪಡೆದುಕೊಳ್ಳುವ ಈ ಭರಾಟೆಯಲ್ಲಿ ಅಲೆಕ್ಸಂಡರ್ ಹಿಂದೆ- ಮುಂದೆ ಯೋಚಿಸದೆ ತನ್ನ ಹೆಸರನ್ನು ಅಧಿಕೃತವಾಗಿ ಬದಲಾಯಿಸಿಕೊಂಡಿದ್ದಾನೆ. ಆಫರ್ ಘೋಷಿಸಿದ್ದ ಸ್ಟೋರ್ ಕೂಡಾ ಆತನಿಗೆ ಶುಕ್ರವಾರದಂದು ಬಹುಮಾನ ನೀಡಿದೆ.
ಕಿವಿ(ಅ.30): ಯುವಕನೊಬ್ಬ ಆ್ಯಪಲ್ ಕಂಪೆನಿಯ ಲೇಟೆಸ್ಟ್ ಫೋನ್ ವಿಜೇತನಾಗಲು ಯುವಕನೊಬ್ಬ ಅಧಿಕೃತವಾಗಿ ತನ್ನ ಹೆಸರನ್ನು 'ಐಫೋನ್ ಸಿಮ್(ಸೆವೆನ್)' ಎಂದು ಬದಲಾಯಿಸಿಕೊಂಡ ವಿಚಿತ್ರ ಘಟನೆ ಯುಕ್ರೇನ್'ನಲ್ಲಿ ನಡೆದಿದೆ. ಅಷ್ಟಕ್ಕೂ ಆತ ಬದಲಾಯಿಸಿಕೊಂಡ ಹೆಸರೇನು? ಇಲ್ಲಿದೆ ವಿವರ.
20ರ ಹರೆಯದ ಈ ಯುವಕನ ಅಸಲಿ ಹೆಸರು ಅಲೆಕ್ಸಾಂಡರ್ ಟ್ಯುರಿನ್. ವಾಸ್ತವವಾಗಿ ಇಲ್ಲಿನ ಎಲೆಕ್ಟ್ರೋನಿಕ್ ಸ್ಟೋರ್ ಒಂದು ತಮ್ಮ ಹೆಸರನ್ನು ಅಧಿಕೃತವಾಗಿ ಬದಲಾಯಿಸಿ 'ಐಫೋನ್ ಸೆವೆನ್' ಎಂದಿಟ್ಟುಕೊಳ್ಳುವ ಮೊದಲ 5 ಮಂದಿಗೆ ಆ್ಯಪಲ್ ಕಂಪೆನಿಯ ಲೇಟೆಸ್ಟ್ ಫೋನ್ ನೀಡುವುದಾಗಿ ಘೋಷಿಸಿತ್ತು. ಆ್ಯಪಲ್ ಕಂಪೆನಿ ಫೋನ್ ಪಡೆದುಕೊಳ್ಳುವ ಈ ಭರಾಟೆಯಲ್ಲಿ ಅಲೆಕ್ಸಂಡರ್ ಹಿಂದೆ- ಮುಂದೆ ಯೋಚಿಸದೆ ತನ್ನ ಹೆಸರನ್ನು ಅಧಿಕೃತವಾಗಿ ಬದಲಾಯಿಸಿಕೊಂಡಿದ್ದಾನೆ. ಆಫರ್ ಘೋಷಿಸಿದ್ದ ಸ್ಟೋರ್ ಕೂಡಾ ಆತನಿಗೆ ಶುಕ್ರವಾರದಂದು ಬಹುಮಾನ ನೀಡಿದೆ.
ಈತ ಇನ್ನು ಅದೆಷ್ಟು ಕಸರತ್ತು ಮಾಡಿದರೂ ಇನ್ನು ಆತನಿಗೆ ಮಕ್ಕಳಾದ ಬಳಿಕವಷ್ಟೇ ಹೆಸರು ಮತ್ತೆ ಬದಲಾಯಿಸಿಕೊಳ್ಳಬಹುದಾಗಿದೆ. ಇದಕ್ಕೂ ಹೆಚ್ಚು ಅಚ್ಚರಿಪಡಿಸುವ ವಿಚಾರವೆಂದರೆ ಯುಕ್ರೇನ್'ನಲ್ಲಿ ಆತ ಪಡೆದ ಫೋನ್ ಬೆಲೆ 850 ಅಮೆರಿಕನ್ ಡಾಲರ್, ಆದರೆ ಆತ ತನ್ನ ಹೆಸರು ಬದಲಾಯಿಸಿಕೊಳ್ಳಲು ವ್ಯಯಿಸಿದ್ದು ಕೇವಲ 2 ಡಾಲರ್.
ಸಿಮ್'ನ ತನ್ನ ಹೆಸರು ಬದಲಾಯಿಸಿಕೊಂಡ ವಿಚಾರ ತಿಳಿದ ಆತನ ಕುಟುಂಬಸ್ಥರು ಹಾಗೂ ಮಿತ್ರರು ದಂಗಾಗಿದ್ದರೂ ಬಳಿಕ ಆತನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಕುರಿತಾಘಿ ಮಾತನಾಡಿದ ಆತನ ಸಹೋದರಿ ತೆತ್ಯಾನಾ 'ಈ ವಿಚಾರವನ್ನು ಸ್ವೀಕರಿಸಲು ಬಲು ಕಷ್ಟವಾಗಿತ್ತು. ಇದನ್ನು ನಂಬಲು ಈಗಲೂ ನನಗೆ ಸಾಧ್ಯವಾಗುತ್ತಿಲ್ಲ' ಎಂದಿದ್ದಾಳೆ.