ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ.ಎಸ್ ಶಿವಳ್ಳಿ ಆಪ್ತ ವಿರೇಶ್ ನಾಗಾವಿಮಠ್ ಈ ಅಕ್ರಮ ದಂಧೆಯ ರೂವಾರಿ ಎಂಬುದು ಬಯಲಾಗಿದೆ. ನಿತ್ಯ ಕುಂದಗೋಳ ತಾಲೂಕಿನಿಂದಲೇ ಲೋಡ್'ಗಟ್ಟಲೆ ಅನ್ನಭಾಗ್ಯ ಅಕ್ಕಿ ಕಾಳಸಂತೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಈಗ ಬಲ ಬಂದಿದೆ.

ಧಾರವಾಡ(ಅ. 21): ಶಾಸಕರ ಆಪ್ತ ಹಾಗೂ ತಾಲೂಕು ಪಡಿತರ ವಿತರಕರ ಸಂಘದ ಅಧ್ಯಕ್ಷನೇ ಬಡವರ ಅನ್ನಭಾಗ್ಯ ಅಕ್ಕಿಯನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಪ್ರಕರಣ ಬಯಲಾಗಿದೆ. ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದಲ್ಲಿ ಇಂದು ಶನಿವಾರ ಗ್ರಾಮಸ್ಥರು ಅನ್ನಭಾಗ್ಯ ಅಕ್ಕಿಯನ್ನ ಕಾಳಸಂತೆಗೆ ಸಾಗಿಸುವ ವ್ಯಕ್ತಿಯನ್ನ ತಡೆದು ಪ್ರಶ್ನಿಸಿದ್ದಾಗ ಈ ಕಳ್ಳದಂಧೆಯ ರೂವಾರಿ ಶಾಸಕನ ಆಪ್ತ ವಿರೇಶ ನಾಗವಿಮಠ್ ಅನ್ನೋದು ಬಯಲಾಗಿದೆ‌. ಆಗ ತತ್'ಕ್ಷಣ ಎಚ್ಚೆತ್ತ ಗ್ರಾಮಸ್ಥರು ಅಕ್ಕಿ ಸಾಗಿಸುತ್ತಿದ್ದ ನಾರಾಯಣ ಕುಲಕರ್ಣಿ ಎಂಬಾತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ‌. ಶಾಸಕರ ಆಪ್ತ ವಿರೇಶ್ ನಾಗಾವಿಮಠ್ ಅವರ ನ್ಯಾಯಬೆಲೆ ಅಂಗಡಿಯಿಂದ ತಂದಿರುವುದಾಗಿ ನಾರಾಯಣ ಕುಲಕರ್ಣಿ ತಪ್ಪೊಪ್ಪಿಕೊಂಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ನಾರಾಯಣ ಕುಲಕರ್ಣಿಗೆ ಥಳಿಸಿ, ಆಹಾರ ಇಲಾಖೆ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಒಟ್ಟು 50ಕೆಜಿ ತೂಕದ 13 ಚೀಲದಲ್ಲಿ ಅನ್ನಭಾಗ್ಯ ಅಕ್ಕಿ ಜಪ್ತಿ ಮಾಡಲಾಗಿದ್ದು, ಅಕ್ಕಿ ಸಾಗಿಸಲು ಬಳಸುತ್ತಿದ್ದ ಒಂದು ನೂರು ಖಾಲಿ ಚೀಲಗಳನ್ನ ವಶಪಡಿಸಿಕೊಳ್ಳಲಾಗಿದೆ.